ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲಾ ಒಂದು ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ. ಇಷ್ಟು ದಿನ ಸ್ಯಾಂಡಲ್‍ವುಡ್‍ನಲ್ಲಿ ಟ್ರೋಲ್ ಆಗುತ್ತಿದ್ದ ರಶ್ಮಿಕಾ ಇದೀಗ ಟಾಲಿವುಡ್‍ನಲ್ಲೂ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ.
ಇತ್ತೀಚೆಗೆ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸಿದ ‘ಸರಿಲೇರು ನೀಕ್ಕೆವ್ವರು’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ರಶ್ಮಿಕಾ ಭಾಷಣ ಕೇಳಿ ತೆಲುಗು ಪ್ರೇಕ್ಷಕರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
Advertisement
Advertisement
ಚಿತ್ರ ಟ್ರೈಲರ್ ಬಿಡುಗಡೆ ವೇಳೆ ರಶ್ಮಿಕಾ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸದ್ಯ ಈ ವಿಡಿಯೋ ನೋಡಿದ ಪ್ರೇಕ್ಷಕರು ಅವರಿಗೆ ‘ಓವರ್ ಆಕ್ಟಿಂಗ್’, ‘ಓವರ್ ಆ್ಯಕ್ಟಿಂಗ್‍ಗೆ ಮುಖ ಏನಾದರೂ ಇದ್ದರೆ ಅದು ರಶ್ಮಿಕಾ ರೀತಿ ಇರುತಿತ್ತು’ ಎಂದು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.
Advertisement
ಮಹೇಶ್ ಬಾಬು ಅವರು ಟ್ರೈಲರ್ ಬಿಡುಗಡೆಯ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ನೋಡಿ ಪ್ರೇಕ್ಷಕರು ಕಮೆಂಟ್ ಮಾಡುವ ಮೂಲಕ ರಶ್ಮಿಕಾ ಅವರ ಕಾಲೆಳೆಯುತ್ತಿದ್ದಾರೆ.
Advertisement
ಈ ವಿಡಿಯೋ ನೋಡಿ ಕೆಲವರು, ಓವರ್ ಆ್ಯಕ್ಟಿಂಗ್ ಅವಾರ್ಡ್ ಗೋಸ್ ಟು ರಶ್ಮಿಕಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಏನ್ ಡವ್ ಮಾಡ್ತಾಳೆ ಗುರು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮೆಗಾ ಸ್ಟಾರ್ ಚಿರಂಜೀವಿ ಅವರ ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬುದು ರಶ್ಮಿಕಾಗೆ ಗೊತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ನಟಿ ಪರ ಬ್ಯಾಟ್ ಬೀಸಿದ್ದಾರೆ. ನಟಿಯರಾದ ಹನ್ಸಿಕಾ, ಕಾಜಲ್, ರಕುಲ್ ಅವರೇ ತೆಲುಗುವಿನಲ್ಲಿ ಮಾತನಾಡುವುದಿಲ್ಲ. ಆದರೆ ರಶ್ಮಿಕಾ ಹಾಗೂ ಸಾಯಿ ಪಲ್ಲವಿ ಟಾಲಿವುಡ್‍ಗೆ ಬಂದು ತೆಲುಗು ಮಾತನಾಡುವುದನ್ನು ಕಲಿತಿದ್ದಾರೆ ಎಂದು ಕಿರಿಕ್ ಬೆಡಗಿಗೆ ಸಪೋರ್ಟ್ ಮಾಡಿದ್ದಾರೆ.