ಟಾಲಿವುಡ್‌ನ ‘ಲೈಗರ್’ ನಟ ವಿಜಯ್ ದೇವರಕೊಂಡ (Vijay Devarakonda) ಅವರು ಕೊನೆಗೂ ಗರ್ಲ್‌ಫ್ರೆಂಡ್ ರಶ್ಮಿಕಾರನ್ನು ಪರಿಚಯಿಸಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ವಿಜಯ್ ಶುಭಕೋರಿದ್ದಾರೆ. ಜೊತೆ ನಟಿಯನ್ನು ಲಕ್ಕಿ ಚಾರ್ಮ್ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ:BBK 11: ಮತ್ತೆ ಬಿಗ್ ಬಾಸ್‌ಗೆ ತನಿಷಾ, ಪ್ರತಾಪ್, ಸಂತು ಪಂತು ಎಂಟ್ರಿ
Advertisement
‘ದಿ ಗರ್ಲ್‌ಫ್ರೆಂಡ್’ ಸಿನಿಮಾದ ಟೀಸರ್‌ನ ಪ್ರತಿಯೊಂದು ದೃಶ್ಯವು ನನಗೆ ಇಷ್ಟವಾಗಿದೆ. ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಅನೇಕ ನಟರಿಗೆ ರಶ್ಮಿಕಾ (Rashmika Mandanna) ಲಕ್ಕಿ ಚಾರ್ಮ್ ಆಗಿದ್ದಾರೆ. ದೊಡ್ಡ ಯಶಸ್ಸಿಗೆ ಅವರು ಭಾಗವಾಗಿದ್ದಾರೆ. ಇಂದು ಅವರು ಸ್ಟಾರ್ ಆಗಿ ಬೆಳೆದಿದ್ದರು. 8 ವರ್ಷಗಳ ಹಿಂದೆ ಹೇಗೆ ಇದ್ದರೋ ಹಾಗಯೇ ಇದ್ದಾರೆ. 8 ವರ್ಷಗಳ ಹಿಂದೆ ನಾನು ಸೆಟ್‌ನಲ್ಲಿ ಭೇಟಿಯಾದ ಅದೇ ಹುಡುಗಿ ಇವರು ಎಂದು ರಶ್ಮಿಕಾ ಸಿನಿ ಜರ್ನಿಯನ್ನು ಹೊಗಳಿದ್ದಾರೆ. ನಿಮಗೆ ಶುಭವಾಗಲಿ ಎಂದು ವಿಜಯ್ ಹಾರೈಸಿದ್ದಾರೆ.
Advertisement
Launching #TheGirlfriendteaser to the world 🙂https://t.co/45kCAMAJqV
I love every visual of this teaser.
I am so excited to see this drama unfold.
She has been a lucky charm for so many of us actors, being part of our biggest successes. Growing fiercely as an actor, a…
— Vijay Deverakonda (@TheDeverakonda) December 9, 2024
Advertisement
‘ದಿ ಗರ್ಲ್‌ಫ್ರೆಂಡ್’ ಟೀಸರ್‌ನಲ್ಲಿ ರಶ್ಮಿಕಾ ಹೆಚ್ಚು ಎಲ್ಲೂ ಮಾತನಾಡಿಲ್ಲ. ಬದಲಾಗಿ ಒಳ್ಳೆಯ ಎಕ್ಸ್‌ಪ್ರೆಷನ್ ಕೊಡುವ ಮೂಲಕ ಅವರು ಹೈಲೆಟ್ ಆಗಿದ್ದಾರೆ. ಭಾವನೆಗಳಲ್ಲಿಯೇ ನಟಿ ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಕೊಡಗಿನ ಕುವರಿಗೆ ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ (Dheekshith Shetty) ಸಾಥ್ ನೀಡಿದ್ದಾರೆ. ಅವರ ಝಲಕ್ ಕೂಡ ಇಲ್ಲಿ ಹೈಲೆಟ್ ಆಗಿದೆ. ‘ಪುಷ್ಪ 2’ ಯಶಸ್ಸಿನಲ್ಲಿ ತೇಲುತ್ತಿರುವ ನಟಿಯ ‘ದಿ ಗರ್ಲ್‌ಫ್ರೆಂಡ್’ (The Girlfriend) ಚಿತ್ರದ ಟೀಸರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
Advertisement
ದೀಕ್ಷಿತ್‌ಗೆ ಗರ್ಲ್‌ಫ್ರೆಂಡ್ ಆಗಿ ರಶ್ಮಿಕಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಡೈರೆಕ್ಟರ್ ರಾಹುಲ್ ರವಿಚಂದ್ರನ್ ನಿರ್ದೇಶನ ಮಾಡಿದ್ದಾರೆ. ಗೀತಾ ಆರ್ಟ್ಸ್ ಮೂಲಕ ಅಲ್ಲು ಅರವಿಂದ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬಂದಿದೆ. ಸದ್ಯದಲ್ಲೇ ರಿಲೀಸ್ ಡೇಟ್ ಕುರಿತು ಚಿತ್ರತಂಡ ಮಾಹಿತಿ ನೀಡಲಿದೆ.