ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನ ರಿಯಾಲಿಟಿ ಶೋನಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿ “ನಾನು ಕೊಡಗಿನವಳು” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ. ಹಾಗಾಗಿ ರಶ್ಮಿಕಾ ಅವರನ್ನು ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ ಜ್ಯೂನಿಯರ್ಸ್’ನಲ್ಲಿ ಸೆಲೆಬ್ರಿಟಿ ಜಡ್ಜ್ ಯಾಗಿ ಆಹ್ವಾನಿಸಿದ್ದರು.
Advertisement
Advertisement
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಹಾಲಕ್ಷ್ಮಿ ಎಂಬ ಹುಡುಗಿ ಭಾಗವಹಿಸುತ್ತಿದ್ದಾಳೆ. ಮಹಾಲಕ್ಷ್ಮಿ ನಾನು ಕರ್ನಾಟಕದವಳು ಎಂದು ಹೇಳಿದಾಗ ರಶ್ಮಿಕಾ ಹೆಮ್ಮೆಯಿಂದ ನಾನು ಕೊಡಗಿನವಳು ಎಂದು ಹೇಳಿದ್ದಾರೆ.
Advertisement
Advertisement
ಮಹಾಲಕ್ಷ್ಮಿ ಪರ್ಫಮೆನ್ಸ್ ಮುಗಿಸಿದ ಬಳಿಕ ಆ ಕಾರ್ಯಕ್ರಮದ ನಿರೂಪಕ ರಶ್ಮಿಕಾ ಅವರಿಗೆ ಈ ಹುಡುಗಿಯ ಊರು ಯಾವುದು ಎಂದು ಕೇಳಿ ಎಂದು ಹೇಳಿದ್ದಾರೆ. ಬಳಿಕ ರಶ್ಮಿಕಾ ನಿನ್ನ ಊರು ಯಾವುದು ಎಂದು ಕೇಳಿದ್ದಾಗ ಮಹಾಲಕ್ಷ್ಮೀ ಕರ್ನಾಟಕ ಎಂದು ಉತ್ತರಿಸಿದ್ದಾಳೆ.
ಮಹಾಲಕ್ಷ್ಮಿ ತನ್ನ ಊರು ಕರ್ನಾಟಕ ಎಂದು ಹೇಳಿದ ತಕ್ಷಣ ರಶ್ಮಿಕಾ “ಹೌದಾ.. ಸೂಪರ್, ಐ ಲವ್ ಯು ಎಂದು ಹೇಳಿದ್ದಾರೆ. ಅಲ್ಲದೇ ಸೆಲೆಬ್ರಿಟಿ ಜಡ್ಜ್ ಸೀಟಿನಲ್ಲೇ ಕುಳಿತು ಮಹಾಲಕ್ಷ್ಮಿಗೆ ಅಪ್ಪುಗೆ ಕೂಡ ನೀಡಿದ್ದಾರೆ.
ಈ ವೇಳೆ ರಶ್ಮಿಕಾ ನಾನು ಕೊಡಗು ಅಂದು ಹೇಳಿದ್ದಾರೆ. ಆಗ ಕಾರ್ಯಕ್ರಮದ ನಿರೂಪಕ ಕೊಡಕ ಎಂದರೆ ಮಗ ಎಂದು ತಮಾಷೆ ಮಾಡಿದ್ದರು. ಆಗ ರಶ್ಮಿಕಾ ಕೊಡಗು ಅದು ಒಂದು ಜಿಲ್ಲೆ ಎಂದು ಹೇಳಿದ್ದರು. ಈ ವೇಳೆ ಮಹಾಲಕ್ಷ್ಮಿ ನಾನು ಶಿವಮೊಗ್ಗದ ಸೊರಬ ತಾಲೂಕಿನವಳು ಎಂದು ಹೇಳಿದ್ದಳು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv