– ತನ್ನ ಬಾಳ ಸಂಗಾತಿ ಹೇಗಿರಬೇಕು ಅಂತ ನ್ಯಾಷನಲ್ ಕ್ರಶ್ ಹೇಳ್ತಾರೆ ಕೇಳಿ
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಇತ್ತು. ಅಲ್ಲದೇ ಇಬ್ಬರೂ ಎಂಗೇಜ್ ಆಗಿದ್ದಾರೆ. 2026ರ ಫೆಭ್ರವರಿಯಲ್ಲೇ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಉದಯಪುರದ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂಬೆಲ್ಲ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇತ್ತು. ಇದೀಗ ಎಲ್ಲ ವದಂತಿಗಳಿಗೆ ನಟಿ ರಶ್ಮಿಕಾ ಫುಲ್‌ಸ್ಟಾಪ್ ಇಟ್ಟಿದ್ದಾರೆ.
Her words 🥹❤️
I hope every girl gets an understanding partner & a man with emotional intelligence! ✨#RashmikaMandanna #TheGirlfriend pic.twitter.com/sBvGpgKZNx
— Shayla ⋆˙ (@bealive_79) November 8, 2025
Honest Townhall ವಾನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ, ವಿಜಯ್ ದೇವರಕೊಂಡ (Vijay Deverakonda) ಅವರನ್ನ ಮದುವೆ ಆಗುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಫ್ಯಾನ್ಸ್‌ವೊಬ್ಬರು ಕೇಳಿದ ಪ್ರಶ್ನೆಗೆ ಮುಗುಳುನಕ್ಕ ನಟಿ ನೇರವಾಗಿ ಉತ್ತರಿಸಿದ್ದಾರೆ. ಆ ರೂಮರ್ಸ್ ಎಲ್ಲರಿಗೂ ಗೊತ್ತಿದೆ, ಅದು ಸತ್ಯ ಎಂದಿದ್ದಾರೆ. ಇದೇ ವೇಳೆ ಮದುವೆ ಆಗೋದಾದ್ರೆ ಯಾರನ್ನ ಆಗ್ತೀರಾ ಎಂಬ ಫ್ಯಾನ್ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ವಿಜಯ್‌ನ ಮದುವೆ ಆಗ್ತೀನಿ ಎಂದಿದ್ದಾರೆ.
ಬಾಳ ಸಂಗಾತಿ ಹೇಗಿರಬೇಕು?
ಇದಕ್ಕೂ ಮುನ್ನ ಸಂದರ್ಶನದಲ್ಲಿ ಮಾತನಾಡಿದ ನಟಿ ಬಾಳ ಸಂಗಾತಿ ಹೇಗಿರಬೇಕು ಅಂತ ಹೇಳಿದ್ರು. ನನಗಾಗಿ ಯುದ್ಧವನ್ನೇ ಮಾಡಬಲ್ಲ, ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದಾಗ ನನ್ನೊಂದಿಗೆ ನಿಲ್ಲಬಲ್ಲ ಜೀವನ ಸಂಗಾತಿ ಬೇಕು ಎಂದು ರಶ್ಮಿಕಾ ಹೇಳಿಕೊಂಡರು.
ಪ್ರಾಮಾಣಿಕವಾಗಿ ಹೇಳಬೇಕಂದ್ರೆ ಅತ್ಯಂತ ಆಳವಾಗಿ ನನ್ನನ್ನ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರಬೇಕು, ಅಂತಹ ಮುಕ್ತಮನಸ್ಸಿನ ಸಂಗಾತಿಯನ್ನ ಬಯಸುತ್ತೇನೆ. ನನಗಾಗಿ ಯುದ್ಧವನ್ನೇ ಮಾಡಬಲ್ಲವನು, ನಾಳೆಯ ದಿನ ಜಗತ್ತೇ ನನ್ನ ವಿರುದ್ಧ ತಿರುಗಿಬಿದ್ದರೆ, ನನಗಾಗಿ ನಿಲ್ಲಬೇಕು. ನಾನೂ ಕೂಡ ಅವನಿಗಾಗಿ ಹೋರಾಡುತ್ತೇನೆ. ಯಾವುದೇ ದಿನ ಯಾವುದೇ ಕ್ಷಣ ಅವನಿಗಾಗಿ ಗುಂಡು ಹೊಡೆಸಿಕೊಳ್ಳಲು ಸಿದ್ಧಳಿದ್ದೇನೆ. ನನ್ನ ಸಂಗಾತಿ ಹೀಗಿರಬೇಕು ಅಂತ ತಿಳಿಸಿದ್ರು.
ಎಲ್ಲಿ ಮದುವೆ?
ಸಹಜವಾಗಿ ದಕ್ಷಿಣ ಭಾರತದಲ್ಲಿ ಮದುವೆಯನ್ನು ಹುಡುಗಿಯ ಮನೆಯವರೇ ನಡೆಸಿಕೊಡುವುದರಿಂದ ರಶ್ಮಿಕಾ ಅವರ ತವರೂರಾದ ಕೊಡಗಿನಲ್ಲೇ ಮದುವೆ ನಡೆಯುಬಹುದು ಎಂದು ಕೆಲವರು ಊಹಿಸಿದ್ದರು. ಇನ್ನೂ ಕೆಲವರು ರಶ್ಮಿಕಾ ಅವರು ತೆಲುಗು ಚಿತ್ರರಂಗದಲ್ಲೇ ಈಗ ಹೆಚ್ಚು ಸಕ್ರಿಯವಾಗಿರುವುದರಿಂದ ಮದುವೆ ಹೈದರಾಬಾದ್ ನಲ್ಲೇ ನಡೆಯಬಹುದು ಎಂದು ಊಹಿಸಿದ್ದರು. ಆದ್ರೆ ಇವರಿಬ್ಬರ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ.
ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಅಲ್ಲಿನ ಐಷಾರಾಮಿ ಪ್ಯಾಲೇಸ್-ಹೋಟೆಲೊಂದರ ಹುಡುಕಾಟದಲ್ಲಿ ರಶ್ಮಿಕಾ ಮದುವೆ ಜವಾಬ್ದಾರಿ ಹೊತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಹುಡುಕಾಟ ನಡೆಸಿದೆ. ಮೂರು ಪ್ಯಾಲೇಸ್ ಹೋಟೆಲ್‌ಗಳನ್ನ ಫೈನಲೈಸ್ ಮಾಡಲಾಗಿದ್ದು ಅವುಗಳಲ್ಲೊಂದನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.
ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಅಲ್ಲಿನ ಐಷಾರಾಮಿ ಪ್ಯಾಲೇಸ್-ಹೋಟೆಲೊಂದರ ಹುಡುಕಾಟದಲ್ಲಿ ರಶ್ಮಿಕಾ ಮದುವೆ ಜವಾಬ್ದಾರಿ ಹೊತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಹುಡುಕಾಟ ನಡೆಸಿದೆ. ಮೂರು ಪ್ಯಾಲೇಸ್ ಹೋಟೆಲ್‌ಗಳನ್ನ ಫೈನಲೈಸ್ ಮಾಡಲಾಗಿದ್ದು ಅವುಗಳಲ್ಲೊಂದನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.



