ಸೌತ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚಿಗೆ ತಮ್ಮ ಸಹಾಯಕನ ಮದುವೆಗೆ ಸಾಕ್ಷಿಯಾಗುವ ಮೂಲಕ ಸುದ್ದಿಯಾಗಿದ್ದರು. ಈಗ ಆ ಮದುವೆಯಲ್ಲಿ ಧರಿಸಿದ ಸೀರೆ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಧರಿಸಿದ ಸಿಂಪಲ್ ಸೀರೆಯ ಬಗ್ಗೆ ಚರ್ಚೆಯಾಗಿದೆ. ಅದರ ಅಸಲಿ ಬೆಲೆ ಕೇಳಿದ್ರೆ ನೀವು ಅಚ್ಚರಿಪಡುತ್ತೀರಾ.
ಸಹಾಯಕ ಸಾಯಿ (Sai) ಮದುವೆ ಹೈದರಾಬಾದ್‌ನಲ್ಲಿ ಸರಳವಾಗಿ ನೆರವೇರಿತು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡು ರಶ್ಮಿಕಾ ಮಂದಣ್ಣ ಕೂಡ ಹಾಜರಿ ಹಾಕಿದ್ದರು. ಈ ಮದುವೆಯಲ್ಲಿ ನಟಿ ಗೋಲ್ಡನ್ ಬಣ್ಣದ ಸಿಂಪಲ್ ಸೀರೆಯಲ್ಲಿ ಮಿಂಚಿದ್ದರು. ಆ ಸಿಂಪಲ್ ಸೀರೆಗೆ 35 ಸಾವಿರ ರೂ. ಎಂದು ಹೇಳಲಾಗುತ್ತಿದೆ. ಸೀರೆಯ ಅಸಲಿ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ. ಇದನ್ನೂ ಓದಿ:ತೆಲುಗು ಬಿಗ್ ಬಾಸ್‌ಗೆ ಕನ್ನಡದ ‘ಅಗ್ನಿಸಾಕ್ಷಿ’ ನಟಿ
ರಣ್‌ಬೀರ್ (Ranbir Kapoor) ನಟನೆಯ ಅನಿಮಲ್ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪುಷ್ಪ 2 (Pushpa 2) ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಟೈಗರ್ ಶ್ರಾಪ್, ಧನುಷ್, ವಿಕ್ರಮ್ ಅವರ ಮುಂಬರುವ ಸಿನಿಮಾಗಳಿಗೆ ರಶ್ಮಿಕಾ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]