ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಿದ ಸಿನಿಮಾ ಅಂದ್ರೆ `ಪುಷ್ಪ'(Pushpa) ಸಿನಿಮಾ. ಈ ಚಿತ್ರ ಗ್ರ್ಯಾಂಡ್ ಸಕ್ಸಸ್ ಆದ್ಮೇಲೆ ನಟ, ನಟಿಯರನ್ನ ಸಾಕಷ್ಟು ಅಭಿಮಾನಿಗಳು ಅವರ ಸ್ಟೈಲ್, ಡ್ರೆಸ್ ಅನುಕರಣೆ ಮಾಡಿದ್ದಾರೆ. ಇನ್ನೂ `ಪುಷ್ಪ’ ಶ್ರೀವಲ್ಲಿ(Srivalli) ಪಾತ್ರದಲ್ಲಿ ನಟಿಸಿದ್ದ ರಶ್ಮಿಕಾ(Rashmika Mandanna) ಡ್ರೆಸ್ ಮೇಲೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಈಗ ಮಾರ್ಕೆಟ್‌ನಲ್ಲಿ ಶ್ರೀವಲ್ಲಿ ಸೀರೆ ಅಂತಲೇ ಸಖತ್ ಫೇಮಸ್ ಆಗಿದೆ.
ದಕ್ಷಿಣದ ಸಿನಿಮಾರಂಗದಲ್ಲಿ ಪುಷ್ಪ ಚಿತ್ರದ ಕೋಟಿ ಕೋಟಿ ಕಲೆಕ್ಷನ್ ಮಾಡಿ ಸಕ್ಸಸ್ ಕಂಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಪಾತ್ರಕ್ಕೆ ಬಹುದೊಡ್ಡ ಫ್ಯಾನ್ ಬೇಸ್ ಸೃಷ್ಟಿಯಾಗಿದೆ. ಇದೀಗ ರಶ್ಮಿಕಾ ಮಂದಣ್ಣ ನಟಿಸಿರುವ ಶ್ರೀವಲ್ಲಿ ಪಾತ್ರದ ಲುಕ್ ಟ್ರೆಂಡ್ ಸೃಷ್ಟಿಸಿದೆ. ನಟಿ ಧರಿಸಿದ್ದ ಸೀರೆ ಟ್ರೆಂಡ್ ಆಗಿ ಹೆಂಗೆಳೆಯರಿಗೆ ಮೋಡಿ ಮಾಡುತ್ತಿದೆ. ಇದನ್ನೂ ಓದಿ:ತಮಿಳು ಸಿನಿಮಾ ನಿರ್ಮಾಪಕಿಯಾದ `ಗಾಳಿಪಟ 2′ ನಟಿ ಶರ್ಮಿಳಾ ಮಾಂಡ್ರೆ
ನವರಾತ್ರಿ ಹಬ್ಬ ಹತ್ತಿರ ಬರುತ್ತಿದ್ದಂತೆ ಶ್ರೀವಲ್ಲಿ ಸೀರೆಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆಯಂತೆ. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಗೋಲ್ಡನ್ ಜರಿಯ ಸೀರೆಯನ್ನ ರಾಜಸ್ತಾನದ ಜೈಪುರದಲ್ಲಿ ಮುಗಿಬಿದ್ದು ಈ ಸೀರೆಯನ್ನ ಖರೀದಿಸುತ್ತಿದ್ದಾರೆ. ಈ ವರ್ಷದ ನವರಾತ್ರಿ ಹಬ್ಬಕ್ಕೆ ಶ್ರೀವಲ್ಲಿ ಸೀರೆ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೆಟ್ ಮಾಡಿರೋದಂತೂ ಗ್ಯಾರೆಂಟಿ.
ಇನ್ನು ʻಪುಷ್ಪ 2ʼ ಚಿತ್ರದ ಶೂಟಿಂಗ್ ಶುರುವಾಗಿದ್ದರೂ, ಪುಷ್ಪ ಶ್ರೀವಲ್ಲಿ ಮೇಲಿರುವ ಕ್ರೇಜ್ ಇನ್ನು ಕಮ್ಮಿಯಾಗಿಲ್ಲ. ಅಲ್ಲು ಅರ್ಜುನ್, ರಶ್ಮಿಕಾ ನಟನೆಯ `ಪುಷ್ಪ’ ಪಾರ್ಟ್ ಒನ್ ದೊಡ್ಡ ಮಟ್ಟದಲ್ಲಿ ಮೋಡಿ ಮಾಡಿದೆ. ಪಾರ್ಟ್ 2 ಯಾವ ಮಟ್ಟಕ್ಕೆ ಸಂಚಲನ ಮೂಡಿಸಲಿದೆ ಎಂಬುದನ್ನ ಕಾದುನೋಡಬೇಕಿದೆ.