ಸೌತ್ ಮತ್ತು ಬಾಲಿವುಡ್ ರಂಗದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿರುವ ನಟಿ ರಶ್ಮಿಕಾ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. ಒಂದಲ್ಲಾ ಒಂದು ಹಾಟ್ ಸುದ್ದಿ ಮೂಲಕ ಸೌಂಡ್ ಮಾಡುತ್ತಲ್ಲೇ ಇರುತ್ತಾರೆ. ಸಾಕಷ್ಟು ಚಿತ್ರಗಳಲ್ಲಿ ಸೂಪರ್ ಸ್ಟಾರ್ಗಳ ಜೊತೆ ತೆರೆಹಂಚಿಕೊಂಡಿರುವ ರಶ್ಮಿಕಾಗೆ ಮೇಡಂ ಅಂತಾ ಕರೆಯೋದು ಒಬ್ಬರೇ ಅಂತೆ.
ಸ್ಯಾಂಡಲ್ವುಡ್ನ `ಕಿರಿಕ್ ಪಾರ್ಟಿ’ ಚಿತ್ರದಿಂದ ಬಣ್ಣದ ಲೋಕಕ್ಕೆ ಲಗ್ಗೆ ಇಟ್ಟ ಕೊಡಗಿನ ಕುವರಿ ರಶ್ಮಿಕಾ ಇದೀಗ ಬಾಲಿವುಡ್ ಬಾಗಿಲಿನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. `ಪುಷ್ಪ’ ಸೂಪರ್ ಡೂಪರ್ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಬ್ಯೂಟಿ,ಸದ್ಯ ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ `ಅನಿಮಲ್’ ರಣ್ಬೀರ್ ಕಪೂರ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿಂದಿಯ `ಗುಡ್ ಬೈ’ ಮತ್ತು `ಮಿಷನ್ ಮಜ್ನು’ ಚಿತ್ರದಲ್ಲಿ ಬಣ್ಣ ಹಚ್ಚಿರೋ ರಶ್ಮಿಕಾಗೆ ಮೇಡಂ ಅಂತಾ ಕರಿಯೋದು ರಣ್ಬೀರ್ ಕಪೂರ್ ಮಾತ್ರ ಅಂತೆ ಈ ಕುರಿತು ಸ್ವತಃ ಕಿರಿಕ್ ಬ್ಯೂಟಿ ರಶ್ಮಿಕಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ನಯನತಾರಾ ಒಂದಲ್ಲ, ಎರಡೆರಡು ಎಡವಟ್ಟು ತಿರುಪತಿ ದೇವಸ್ಥಾನದಿಂದ ಲೀಗಲ್ ನೋಟಿಸ್
ಇತ್ತೀಚೆಗಷ್ಟೇ ರಶ್ಮಿಕಾ ನೀಡಿದ ಸಂದರ್ಶನವೊಂದರಲ್ಲಿ ರಣ್ಬೀರ್ ಕುರಿತು ಹೊಸ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ. ರಣ್ಬೀರ್ ತುಂಬಾ ಒಳ್ಳೆಯವರು. ನಾನು ಅವರನ್ನು ಮೊದಲು ಭೇಟಿಯಾದಾಗ, ತುಂಬಾ ನರ್ವಸ್ ಆಗಿದ್ದೆ, ನಂತರ ಭೇಟಿಯಾದ ಕೆಲವೇ ನಿಮಿಷಗಳಲ್ಲಿ ಆತ್ಮೀಯಳಾದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಚಿತ್ರರಂಗದಲ್ಲಿ ರಣ್ಬೀರ್ ಒಬ್ಬರೇ ಮೇಡಂ ಎಂದು ಕರೆಯುತ್ತಾರೆ ಎಂದು ಈ ವೇಳೆ ಹೇಳಿಕೊಂಡಿದ್ದಾರೆ.
ಸದ್ಯ ಮನಾಲಿಯಲ್ಲಿ `ಅನಿಮಲ್’ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಚಾಲೆಂಜಿಂಗ್ ಪಾತ್ರಗಳು ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ರಶ್ಮಿಕಾ ನಟನೆಯ ಚಿತ್ರಗಳ ತೆರೆಗೆ ಅಪ್ಪಳಿಸಲಿದೆ.