ಟಾಲಿವುಡ್ (Tollywood) ಅಂಗಳದಲ್ಲಿ ಸದ್ಯ ನಾಯಕ ನಟರಿಗಿಂತ ನಟಿಯರ ಜಡೆ ಜಗಳ ಜೋರಾಗಿದೆ. ಕನ್ನಡದ ಶ್ರೀಲೀಲಾ (Sreeleela) ಮತ್ತು ‘ಸೀತಾರಾಮಂ’ ಸುಂದರಿ ಮೃಣಾಲ್ (Mrunal) ಎಂಟ್ರಿಯಿಂದ ರಶ್ಮಿಕಾ ಮಂದಣ್ಣ (Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ ಆಫರ್‌ಗೆ ಕತ್ತರಿ ಬಿದ್ದಿದೆ. ತೆಲುಗಿನಲ್ಲಿ ರಶ್ಮಿಕಾ, ಪೂಜಾ, ಕೃತಿ ಕಾಲ ಮುಗಿತ್ತಾ ಎಂಬ ಪ್ರಶ್ನೆ ಕಾಡುತ್ತಿದೆ.
ನ್ಯಾಷನಲ್ ಕ್ರಶ್ ಆಗಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾ ಇಂಡಸ್ಟ್ರಿಯನ್ನ ಆಳುತ್ತಿದ್ದರು. ಸ್ಟಾರ್ ನಟರಿಗೆ ಕಿರಿಕ್ ಚೆಲುವೆನೇ ಬೇಕು ಅಂತಾ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಹಾಗೆಯೇ ಕರಾವಳಿ ಬ್ಯೂಟೀಸ್ ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೂ(Krithi Shetty) ಭಾರೀ ಹವಾ ಇತ್ತು. ‘ಉಪ್ಪೇನಾ’ ಹಿಟ್ ಆದಮೇಲೆ ಕೃತಿಗೆ ಸಾಲು ಸಾಲು ಆಫರ್ ಸಿಗುತ್ತಿತ್ತು. ಈಗ ಸ್ವಲ್ಪ ಜಾಸ್ತಿಯೇ ಆಫರ್‌ಗೆಲ್ಲಾ ಬ್ರೇಕ್ ಬಿದ್ದಿದೆ.
- Advertisement
- Advertisement
ಪೆಳ್ಳಿ ಸಂದಡಿ, ಧಮಾಕಾ (Dhamaka) ಎರಡೇ ತೆಲುಗು ಸಿನಿಮಾ ಮಾಡಿದ್ರು ಶ್ರೀಲೀಲಾ, ಈ 2 ಸಿನಿಮಾದಿಂದ ನಟಿಯ ಕೆರಿಯರ್ ಚೇಂಜ್ ಆಯ್ತು. ರಶ್ಮಿಕಾ ಪಾಲಿಗೆ ಬರುತ್ತಿದ್ದ ಸಿನಿಮಾಗೆಲ್ಲಾ ಶ್ರೀಲೀಲಾ ನಾಯಕಿಯಾದರು. ಪೂಜಾ ಹೆಗ್ಡೆಗೂ ಅದೇ ಎಫೆಕ್ಟ್ ಆಗಿದೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಸಿನಿಮಾದಲ್ಲಿ ಪೂಜಾ ಹೆಗ್ಡೆ (Pooja Hegde) ನಾಯಕಿಯಾಗಿ ಮಿಂಚಬೇಕಿತ್ತು. ಆದರೆ ಅದೀಗ ಶ್ರೀಲೀಲಾ ಪಾಲಾಗಿದೆ. 10ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ಹೀರೋಯಿನ್ ಆಗಿದ್ದಾರೆ.
ಆಗಿದ್ದು ಆಯ್ತು ಅಂತಾ ರವಿತೇಜಾ ಸಿನಿಮಾದಲ್ಲಿ ಪೂಜಾ ಹೆಗ್ಡೆಗೆ ಆಫರ್ ಸಿಕ್ಕಿತ್ತು. ಆದರೆ ಆ ಸಿನಿಮಾಗೆ ಮೃಣಾಲ್ ಠಾಕೂರ್ ನಾಯಕಿಯಾಗಿದ್ದಾರೆ. ಸೀತಾ ರಾಮಂ ಸಕ್ಸಸ್ ನಂತರ ಸೀತಾ, ಈಗ ಸೌತ್- ಬಾಲಿವುಡ್ ಎರಡರಲ್ಲೂ ಬ್ಯುಸಿಯಿದ್ದಾರೆ. ಇನ್ನೂ ಕೃತಿ ಶೆಟ್ಟಿಗೆ ಪಾಲಿಗೆ ಸಿಕ್ಕಿದ್ದು ಪಂಚಾಮೃತ ಎನ್ನುವಂತೆ ಆಗಿದೆ. ಇದನ್ನೂ ಓದಿ:ಇಳಿವಯಸ್ಸಿನವರ ಜೊತೆ ತಮನ್ನಾ ನಟನೆ: ಟ್ರೋಲ್ ಮಾಡಿದವರ ವಿರುದ್ದ ನಟಿ ಗರಂ
ಒಟ್ನಲ್ಲಿ ರಶ್ಮಿಕಾ, ಪೂಜಾ, ಕೃತಿ ಜಮಾನ ನಡೆಯುತ್ತಿದ್ದ ಕಾಲ ಈಗ ಬದಲಾಗಿದೆ. ಅವರ ಸ್ಥಾನಕ್ಕೆ ಶ್ರೀಲೀಲಾ ಮತ್ತು ಮೃಣಾಲ್ ಮೇನಿಯಾ ಶುರುವಾಗಿದೆ. ಟಾಲಿವುಡ್‌ನಲ್ಲಿ ಸದ್ಯ ಶ್ರೀಲೀಲಾ- ಮೃಣಾಲ್ ಲಿಡಿಂಗ್ ಲೇಡಿಯಾಗಿ ಕಂಗೊಳಿಸುತ್ತಿದ್ದಾರೆ.