ದಕ್ಷಿಣ ಭಾರತದ ನಟಿಯಾಗಿ ಮಿಂಚ್ತಿರುವ ರಶ್ಮಿಕಾ ಮಂದಣ್ಣ ಸದಾ ಒಂದಲ್ಲಾ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನಿರ್ಮಾಪಕ ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಮುಂಬೈಯಲ್ಲಿದ್ದ `ಪುಷ್ಪ’ ಬ್ಯೂಟಿ ರಶ್ಮಿಕಾ ಹೈದರಾಬಾದ್‌ಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹಸಿರು ಬಣ್ಣದ ಡ್ರೆಸ್‌ನಲ್ಲಿ ರಶ್ಮಿಕಾ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.
View this post on Instagram
ನಟಿ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ಮಧ್ಯೆ ರಶ್ಮಿಕಾ ಕೊಂಚ ಬಿಡುವು ಮಾಡಿಕೊಂಡು ತನ್ನ ಹುಟ್ಟೂರಾದ ಕೊಡಗಿಗೆ ಬಂದಿದ್ದರು. ತನ್ನ ಕುಟುಂಬ ಮತ್ತು ಸ್ನೇಹಿತೆ ರಾಗಿಣಿ ಮದುವೆಗೆ ಬಂದು ಹಾರೈಸಿ ಹೋಗಿದ್ದರು. ಬಳಿಕ ನಿರ್ಮಾಪಕ ಕರಣ್ 50ನೇ ವರ್ಷದ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡು ನೋಡುಗರ ಗಮನ ಸೆಳೆದಿದ್ದರು. ಪಾರ್ಟಿ ನಂತರ ಮುಂಬೈಯಿಂದ ತನ್ನ ಹೈದರಾಬಾದ್ ಮನೆಗೆ ಮರಳಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಹಸಿರು ಬಣ್ಣದ ಹೂವಿನ ಡಿಸೈನ್‌ಯಿರುವ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಬಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕೆಜಿಎಫ್ ಸಿನಿಮಾ ಬಗ್ಗೆ ಸುದೀಪ್ ಮಾತು
ಇನ್ನು ರಶ್ಮಿಕಾ ನಟನೆಯ ಸಿನಿಮಾ ಲಿಸ್ಟ್ನಲ್ಲಿ `ಅನಿಮಲ್’, `ಪುಷ್ಪ’, ದಳಪತಿ ವಿಜಯ್ ಜತೆ ಒಂದು ಚಿತ್ರ, `ಗುಡ್ ಬೈ’, `ಮಿಷನ್ ಮಜ್ನು’ ಸಿನಿಮಾಗಳಿವೆ. ಕಿರಿಕ್ ಹುಡುಗಿಯ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.