ಕನ್ನಡದ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ನ್ಯಾಷನಲ್ ಕ್ರಶ್ ಆಗಿ ಮಿಂಚ್ತಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ನಾಯಕಿಯಾಗಿ ಡಿಮ್ಯಾಂಡ್ ಕ್ರಿಯೆಟ್ ಮಾಡಿಕೊಂಡಿದ್ದಾರೆ. ಈ ನಡುವೆ ಚೆಂದದೊಂದು ಫೋಟೋಶೂಟ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಾಶ್ಮೀರದಲ್ಲಿ ಸ್ಟೈಲ್ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್
ಸ್ಯಾಂಡಲ್‌ವುಡ್‌ನ ‘ಕಿರಿಕ್ ಪಾರ್ಟಿʼ (Kirik Party) ಸಿನಿಮಾದಿಂದ ಬಣ್ಣದ ಬದುಕು ಶುರು ಮಾಡಿದ ನಟಿ, ಮೊದಲ ಸಿನಿಮಾದಲ್ಲೇ ಭರ್ಜರಿ ಸಕ್ಸಸ್ ಕಂಡರು. ಬಳಿಕ ಅಂಜನಿಪುತ್ರ, ಚಮಕ್, ಯಜಮಾನ, ಪೊಗರು ಸಿನಿಮಾಗಳ ಮೂಲಕ ಮೋಡಿ ಮಾಡಿದ್ರು ಕೂರ್ಗ್ ಬ್ಯೂಟಿ. ಕಡೆಯದಾಗಿ ಧ್ರುವ ಸರ್ಜಾ ನಾಯಕಿಯಾಗಿ ಪೊಗರು ಸಿನಿಮಾದಲ್ಲಿ ನಟಿಸಿದ್ದರು. ಈಗ ಟಾಲಿವುಡ್- ಬಾಲಿವುಡ್ ಅಂತಾ ಅಲ್ಲೇ ಸೆಟಲ್ ಆಗಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋವೊಂದು ಶೇರ್ ಮಾಡಿದ್ದಾರೆ. ಕೆಂಪು ಬಣ್ಣದ ಟಾಪ್, ಪಿಂಕ್ ಕಲರ್ ಸ್ಕರ್ಟ್ ಧರಿಸಿ ಹಾಟ್ ಕಾಣಿಸಿಕೊಂಡಿದ್ದಾರೆ. ಬಾತ್ ಟಬ್ ಬಳಿ ಸೆಕ್ಸಿಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಸದ್ಯ ರಣ್‌ಬೀರ್ ಕಪೂರ್-ರಶ್ಮಿಕಾ ನಟನೆಯ ಸಿನಿಮಾ ಅನಿಮಲ್ ಈ ವರ್ಷದ ಅಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಪುಷ್ಪ 2, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೂರ್ಗ್ ಬ್ಯೂಟಿ ಬ್ಯುಸಿಯಾಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]