ಕನ್ನಡತಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ನಿಂದ ಹಿಡಿದು ಎಲ್ಲಾ ವುಡ್ನಲ್ಲೂ ಬಹುಬೇಡಿಕೆಯಿರುವ ನಟಿ. ಪ್ರತಿದಿನ ದಿನ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲ್ಲೇ ಇರುತ್ತಾರೆ. ಈಗ ಪಿಂಕ್ ಕಲರ್ ಸೀರೆಯಲ್ಲಿ ಸಖತ್ ಹಾಟ್ ಆಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
View this post on Instagram
ನಟಿ ರಶ್ಮಿಕಾ ಮಾಡರ್ನ್ ಲುಕ್ಕಿಗೂ ಸೈ, ಸಂಪ್ರದಾಯಿಕವಾಗಿ ಕಾಣಿಸಿಕೊಳ್ಳಲು ಜೈ ಅನ್ನೊದನ್ನ ಈಗಾಗಲೇ ಪ್ರೂವ್ ಮಾಡಿದ್ದಾರೆ. ಸದ್ಯ ಪಿಂಕ್ ಕಲರ್ ಸೀರೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸೀರೆಯಲ್ಲಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ನಯಾ ಲುಕ್ ನೋಡಿ ಫ್ಯಾನ್ಸ್ ಕೂಡ ಸಖತ್ ದಿಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಮೂರನೇ ಮದುವೆಗೆ ರೆಡಿಯಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ!
`ಪುಷ್ಪ’ ಸಕ್ಸಸ್ ನಂತರ ಸದ್ಯ ರಶ್ಮಿಕಾ ಬತ್ತಳಿಕೆಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜತೆ `ಮಿಷನ್ ಮಜ್ನು’, ಬಿಗ್ಬಿ ಜತೆ `ಗುಡ್ ಬೈ’, ದುಲ್ಕರ್ ಜತೆ `ಸೀತಾ ರಾಮಮಂ’, ವಿಜಯ್ ದಳಪತಿ ಜತೆ `ವಾರಿಸು’, ಅಲ್ಲು ಅರ್ಜುನ್ ಜತೆ `ಪುಷ್ಪ 2′, ರಣ್ಬೀರ್ ಕಪೂರ್ ಜತೆ `ಅನಿಮಲ್’ ಚಿತ್ರಗಳಿವೆ. ಒಂದಿಷ್ಟು ಸಿನಿಮಾಗಳ ಚಿತ್ರೀಕರಣ ಮುಗಿದಿದ್ದು, ಒಂದೊಂದೇ ಸಿನಿಮಾಗಳು ತೆರೆಗೆ ಬರಲಿದೆ.
Live Tv