ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

Public TV
1 Min Read
rashmika mandanna 4 1

ಬಾಲಿವುಡ್‌ನಲ್ಲಿ ಬಾವುಟ ಹಾರಿಸಲು ರಶ್ಮಿಕಾ (Rashmika Mandanna) ಹಲವು ವರ್ಷಗಳಿಂದ ಒದ್ದಾಡುತ್ತಿದ್ದಾರೆ. ಆದರೆ ಅದೃಷ್ಟ ಕೈ ಕೊಟ್ಟಿದೆ. ಅಮಿತಾಬ್ ಬಚ್ಚನ್ ಜತೆ ನಟಿಸಿದ ಗುಡ್ ಬೈ ಮಕಾಡೆ ಮಲಗಿತು. ಮಿಶನ್ ಮಜ್ನು ಕೂಡ ಅದೇ ಹಾದಿ. ನ್ಯಾಷನಲ್ ಕ್ರಶ್‌ಗೆ ಅದ್ಯಾಕೊ ನ್ಯಾಷನಲ್ ಸ್ಟಾರ್ ಪಟ್ಟ ಸಿಗಲಿಲ್ಲ. ಇದೀಗ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ (Animal) ಮುಗಿಸಿದ್ದಾರೆ. ರಣಬೀರ್ ಕಪೂರ್ (Ranbir Kapoor) ನಾಯಕ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ಮೇಲೆ ನಿರೀಕ್ಷೆ ಇದೆ. ಅದಕ್ಕೆ ರಶ್ಮಿಕಾ ಕುಲುಕುಲು ನಗುತ್ತಿದ್ದಾರೆ.

rashmika mandanna 1 1

ಅನಿಮಲ್ ಮುಗಿಯಿತು. ಅದ್ಭುತ ಪಾತ್ರ. ಈ ರೂಪದಲ್ಲಿ ನನ್ನನ್ನು ಯಾರೂ ನೋಡಿಲ್ಲ. ನಿರ್ದೇಶಕ ಸಂದೀಪ್ (Sandeep) ವಂಡರ್‌ಫುಲ್. ರಣಬೀರ್ ಬಗ್ಗೆ ಏನು ಹೇಳಬೇಕು ? ಅಮೇಜಿಂಗ್ ಆಕ್ಟರ್. ಅಷ್ಟೇ ಒಳ್ಳೆಯ ಮನಸಿನ ಹುಡುಗ. ಅನಿಮಲ್ ನಿಮ್ಮನ್ನು ಖಂಡಿತ ರಂಜಿಸಲಿದೆ ಎನ್ನುತ್ತಾರೆ ರಶ್ಮಿಕಾ ಮಂದಣ್ಣ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

rashmika mandanna

ಇದೊಂದು ಸಿನಿಮಾದ ಮೇಲೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ರಶ್ಮಿಕಾ. ದಕ್ಷಿಣ ಭಾರತದ ನಟಿಯರು ಬಾಲಿವುಡ್‌ನಲ್ಲಿ ನಟಿಸುವುದು ಮಾಮೂಲಿ. ಆದರೆ ಅಲ್ಲಿ ಗೆದ್ದು ಬೀಗುವುದು, ಸೆಡ್ಡು ಹೊಡೆದು ಹೈವೇ ನಿರ್ಮಿಸಿಕೊಳ್ಳೋದು ಸುಲಭ ಅಲ್ಲ.

ರಶ್ಮಿಕಾಗೆ ಈಗಾಗಲೇ ಎರಡು ಸೋಲು ಅದನ್ನು ತೋರಿಸಿದೆ. ಈ ಬಾರಿ ಅನಿಮಲ್ ಕೈ ಹಿಡಿಯಬೇಕು. ಇಲ್ಲದಿದ್ದರೆ ಇನ್ನಷ್ಟು ಸೈಕಲ್ ತುಳಿಯಬೇಕು. ಎಲ್ಲವೂ ಒಂದೇ ಸಲ, ಒಂದೇ ತಟ್ಟೆಯಲ್ಲಿ ಸಿಕ್ಕಿಬಿಟ್ಟರೆ ಏನು ಮಜಾ ಅಲ್ವಾ ? ಕುದ್ದಷ್ಟು ಹಾಲಿಗೆ ರುಚಿ ಜಾಸ್ತಿ.ಕೆನೆ ಕೂಡ.

Share This Article