ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸ್ಯಾಂಡಲ್‌ವುಡ್‌ಗೆ ನಿಲುಕದ ನಕ್ಷತ್ರ ಆಗಿದ್ದಾರೆ. ಬೇಡಿಕೆಯ ಜೊತೆ ನಟಿಯ ಸಂಭಾವನೆ ದುಪ್ಪಟ್ಟಾಗಿದೆ. ಸದ್ಯ ನಯನತಾರಾ (Nayanathara), ತ್ರಿಷಾರನ್ನು ಹಿಂದಿಕ್ಕಿ ರಶ್ಮಿಕಾ ಸುದ್ದಿಯಲ್ಲಿದ್ದಾರೆ. ಮುಂಬರುವ ಸಲ್ಮಾನ್ ಖಾನ್ (Salman Khan) ಚಿತ್ರಕ್ಕೆ ದುಬಾರಿ ಸಂಭಾವನೆಗೆ ನಟಿ ಬೇಡಿಕೆ ಇಟ್ಟಿದ್ದಾರೆ.
ಸೌತ್‌ನ ಸ್ಟಾರ್ ಡೈರೆಕ್ಟರ್ ಎ.ಆರ್ ಮುರುಗದಾಸ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರಕ್ಕೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿರೋದು ಹಳೆಯ ಸುದ್ದಿ. ಈಗ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದರೆ ಸಂಭಾವನೆ ವಿಚಾರದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ನಟಿಯರಾದ ನಯನತಾರಾ ಮತ್ತು ತ್ರಿಷಾಗೆ ಕೊಡಗಿನ ನಟಿ ಠಕ್ಕರ್ ಕೊಟ್ಟಿದ್ದಾರೆ.
ಸಾಕಷ್ಟು ವರ್ಷಗಳಿಂದ ನಟಿಸುತ್ತಿರುವ ನಯನತಾರಾ, ತ್ರಿಷಾ (Trisha) ಒಂದು ಸಿನಿಮಾಗೆ 10ರಿಂದ 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ರಶ್ಮಿಕಾ, ಸಲ್ಮಾನ್ ನಟನೆಯ ’ಸಿಖಂದರ್’ (Sikandar Film) ಚಿತ್ರದಲ್ಲಿ ನಟಿಸಲು 15 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಧ್ರುವ ಸರ್ಜಾ ನಟನೆಯ ‘ಬಹದ್ದೂರ್’ ರೀ ರಿಲೀಸ್
ಆದರೆ ನಟಿಯ ಜೊತೆ ಮಾತುಕತೆ ನಡೆಸಿದ ಚಿತ್ರತಂಡ ಕಡೆಯದಾಗಿ 13 ಕೋಟಿ ರೂ. ಸಂಭಾವನೆ ನೀಡಲು ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಖ್ಯಾತ ನಟಿಯರಿಗೆ ‘ಪುಷ್ಪ’ ನಟಿ ಠಕ್ಕರ್ ಕೊಟ್ಟಿದ್ದಾರೆ. ಇದೀಗ ಭಾರೀ ಸಂಭಾವನೆ ಪಡೆಯುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಗ್ರ ಸ್ಥಾನದಲ್ಲಿದ್ದಾರೆ.
ಸದ್ಯ ಪುಷ್ಪ 2, ಅನಿಮಲ್ ಪಾರ್ಕ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಸಿಖಂದರ್, ಚಾವಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.