ರಶ್ಮಿಕಾ ಮಂದಣ್ಣ ಅಭಿನಯದ ವಿಭಿನ್ನ ಕಾನ್ಸೆಪ್ಟ್ ನ ಥಮಾ (Thama) ಸಿನಿಮಾದ ಬಿಗ್ ಅಪ್ ಡೇಟ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದ ಬಿಗ್ ಅಪ್ ಡೇಟ್ ಇದೇ ಮಂಗಳವಾರ (ಆ.19) ರಂದು ಅಭಿಮಾನಿಗಳಿಗೆ ಸಿಗಲಿದ್ದು, ಈ ಅಪ್ ಡೇಟ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ಥಮಾ ಸಿನಿಮಾ ದೀಪಾವಳಿಗೆ ವಿಶ್ವದಾದ್ಯಂತ ತೆರೆಕಾಣಲಿದೆ. ಆದಿತ್ಯ ಸರ್ಪೋತ್ದಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನ ದಿನೇಶ್ ವಿಜನ್ ಹಾಗೂ ಅಮರ್ ಕೌಶಿಕ್ ನಿರ್ಮಾಣ ಮಾಡಿದ್ದಾರೆ.
View this post on Instagram
ಹಾರರ್ ಕಾಮಿಡಿ ಸಬ್ಜೆಕ್ಟ್ ನ ಥಮಾ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಜೊತೆಗೆ ಆಯುಶ್ಮಾನ್ ಖುರಾನ ನಟಿಸಿದ್ದಾರೆ. ಇದೇ ಮಂಗಳವಾರ ಬೆಳಗ್ಗೆ 11.11ಕ್ಕೆ ಮಹತ್ವದ ಅಪ್ ಡೇಟ್ ನೀಡೋದಾಗಿ ರಶ್ಮಿಕಾ ಜಾಲತಾಣದಲ್ಲಿ ಹಂಚಿಕೊಂಡಿರೋದಕ್ಕೆ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಪುಷ್ಪಾ ಹಾಗೂ ಛಾವಾ ಸಿನಿಮಾದ ಸಕ್ಸಸ್ ನಂತರ ಥಮಾ ಸಿನಿಮಾದ ಹೊಸ ಅಪ್ ಡೇಟ್ ಸಿಕ್ಕಿರೋದು ರಶ್ಮಿಕಾ ಭಕ್ತಗಣಕ್ಕೆ ಸಂಭ್ರಮ ಜೋರಾಗಿದೆ.