ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಟಾಲಿವುಡ್ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಪ್ರಸ್ತುತ ಬ್ಯುಸಿಯಿರುವ ನಟಿ. ಕನ್ನಡ ಚಿತ್ರರಂಗದಿಂದ ಶುರುವಾದ ಬಣ್ಣದ ಬದುಕು ಇದೀಗ ಬಾಲಿವುಡ್ ಬಾಗಲಿಗೆ ತಂದು ನಿಲ್ಲಿಸಿದೆ. ಇತ್ತೀಚೆಗಷ್ಟೇ ಕೊಡಗಿಗೆ ಭೇಟಿ ನೀಡಿರುವ ರಶ್ಮಿಕಾ ಮಂದಣ್ಣ, ತಮ್ಮ ಕುಟುಂಬದ ಜತೆಯಿರೋ ಫೋಟೋವೊಂದನ್ನು ರಶ್ಮಿಕಾ ಶೇರ್ ಮಾಡಿದ್ದಾರೆ. ಈಗ ಈ ಫೋಟೋ ಭಾರೀ ವೈರಲ್ ಆಗುತ್ತಿದೆ.
ಅದೃಷ್ಟದ ಹುಡುಗಿ ರಶ್ಮಿಕಾ `ಪುಷ್ಪ’ ಬಂಪರ್ ಸಕ್ಸಸ್ ನಂತರ ಬಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್ಗೆ ಕೊಂಚ ಬ್ರೇಕ್ ಕೊಟ್ಟು, ತನ್ನ ಹುಟ್ಟುರಾದ ಕೊಡಗಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, ಸ್ನೇಹಿತೆ ರಾಗಿಣಿ ಮದುವೆಗೂ ಬಂದು ಎಂಜಾಯ್ ಮಾಡಿದ್ದರು. ಈ ವೇಳೆ ಫ್ಯಾಮಿಲಿ ಜತೆ ಕೂಡ ಸಮಯ ಕಳೆದಿದ್ದಾರೆ. ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ಪ ಅಮ್ಮ ಮತ್ತು ತಂಗಿ ಜತೆ ಫೋಟೋ ಶೇರ್ ಮಾಡಿದ್ದು, ರಶ್ಮಿಕಾ ಅವರ ತಂಗಿ ಶಿಮನ್ ಮಂದಣ್ಣ ಹೈಲೆಟ್ ಆಗಿದ್ದಾರೆ.
View this post on Instagram
ಈ ಫೋಟೋದಲ್ಲಿ ತಂದೆ ಮದನ್ ಮಂದಣ್ಣ, ತಾಯಿ ಸುಮನ್ ಮಂದಣ್ಣ ಮತ್ತು ತಂಗಿ ಶಿಮನ್ ಮಂದಣ್ಣ ಜತೆ ಖುಷಿ ಖುಷಿಯಾಗಿ ರಶ್ಮಿಕಾ ಪೋಸ್ ನೀಡಿದ್ದಾರೆ. ಕೈತಂಬಾ ಸಿನಿಮಾ ಇರುವುದರಿಂದ ಬಹಳ ಸಮಯದ ನಂತರ ಭೇಟಿಯಾಗಿರುವ ರಶ್ಮಿಕಾ, ಫೋಟೋ ಜತೆ ನಿಮ್ಮಿಂದಲೇ ನಮ್ಮ ಮುಖದಲ್ಲಿ ನಗು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ರಶ್ಮಿಕಾ ತೆಲುಗು ಮತ್ತು ಹಿಂದಿ ಸೇರಿದಂತೆ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿ ಮಿಂಚ್ತಿದ್ದಾರೆ. ದಿನದಿಂದ ದಿನಕ್ಕೆ ರಶ್ಮಿಕಾ ನೇಮು ಫೇಮು ಜಾಸ್ತಿಯಾಗುತ್ತಿದೆ. ಕಿರಿಕ್ ಸುಂದರಿಯ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.