Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Reading: Explainer | ಉದಯೋನ್ಮುಖ ಪ್ರತಿಭೆಗಳ ಹಬ್ಬ – ಮಾ.28 ರಿಂದ ಐಪಿಎಲ್‌ ಟೂರ್ನಿ ಶುರು; ಏನುಂಟು ವಿಶೇಷ?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US

Home | Sports | Cricket | Explainer | ಉದಯೋನ್ಮುಖ ಪ್ರತಿಭೆಗಳ ಹಬ್ಬ – ಮಾ.28 ರಿಂದ ಐಪಿಎಲ್‌ ಟೂರ್ನಿ ಶುರು; ಏನುಂಟು ವಿಶೇಷ?

Cricket

Explainer | ಉದಯೋನ್ಮುಖ ಪ್ರತಿಭೆಗಳ ಹಬ್ಬ – ಮಾ.28 ರಿಂದ ಐಪಿಎಲ್‌ ಟೂರ್ನಿ ಶುರು; ಏನುಂಟು ವಿಶೇಷ?

Last updated: March 26, 2026 3:23 pm
By
Public TV
Share
6 Min Read
IPL 2026

– ಮಹಿ, ಕೊಹ್ಲಿ, ಹಿಟ್‌ಮ್ಯಾನ್‌ಗೆ ಕೊನೆಯಾಗುತ್ತಾ ಈ ಟೂರ್ನಿ?

ಐಸಿಎಲ್‌ಗೆ ವಿರುದ್ಧವಾಗಿ ಶುರುವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಕ್ರಿಕೆಟ್‌ ಟೂರ್ನಿ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಬೆಳೆದುನಿಂತಿದೆ. ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿದೆ. ಇದರ ಯಶಸ್ಸು ದೇಶದಲ್ಲಿ ಇತರ ಕ್ರೀಡೆಗಳ ಬೆಳವಣಿಗೆಗೆ ಸ್ಫೂರ್ತಿಯಾಗಿದೆ. 2008 ರಲ್ಲಿ ಶುರುವಾದ ಟಿ20 ಮಾದರಿಯ ಕ್ರಿಕೆಟ್‌ ಲೀಗ್‌ 18 ಆವೃತ್ತಿಗಳನ್ನ ಯಶಸ್ವಿಯಾಗಿ ಪೂರೈಸಿದ್ದು, ಇದೇ ಮಾರ್ಚ್‌ 28 ರಂದು 19ನೇ ಆವೃತ್ತಿಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ.

Lights 💡
Camera 📸
Smile 🤗

Sneak peek into a fun BTS with the 🔟 #TATAIPL Captains 🙌 pic.twitter.com/3P8OY3TpEI

— IndianPremierLeague (@IPL) March 25, 2026

ಸಂಪ್ರದಾಯದಂತೆ 2025ರ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ತವರು ಕ್ರೀಡಾಂಗಣವಾದ ಚಿನ್ನಸ್ವಾಮಿ ಅಂಗಳದಲ್ಲೇ 19ನೇ ಆವೃತ್ತಿಯ ಉದ್ಘಾಟನಾ ಸಮಾರಂಭ ನೆರವೇರಲಿದೆ. ಅಲ್ಲದೇ ಆರ್‌ಸಿಬಿ ಪಾಲಿನ ಆರಂಭಿಕ 5 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ.

ಕಳೆದ 18 ವರ್ಷಗಳಲ್ಲಿ‌ ತನ್ನ ಮಾರುಕಟ್ಟೆ ಮೌಲ್ಯವನ್ನ 1 ಲಕ್ಷ ಕೋಟಿಗೂ ಅಧಿಕ ಮೊತ್ತಕ್ಕೆ ವೃದ್ಧಿಸಿಕೊಳ್ಳುವ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿ ರೂಪುಗೊಂಡಿರುವ ಐಪಿಎಲ್‌, ತಾನು ಬೆಳೆದಂತೆ ಇತರ ಕ್ರೀಡೆಗಳ ಬೆಳವಣಿಗೆಗೂ ಸ್ಫೂರ್ತಿಯಾಗಿ ನಿಂತಿದೆ. ಚುಟುಕು ಮಾದರಿಯ ಐಪಿಎಲ್‌ ವಯಸ್ಸಿನ ಮಿತಿಯಿಲ್ಲದೇ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದರ ಪ್ರೇರಣೆಯಿಂದ ವಿಶ್ವದ ವಿವಿಧ ದೇಶದಗಳಲ್ಲಿ ಹಲವು ಮಾದರಿಯ ಚುಟುಕು ಟೂರ್ನಿಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಐಪಿಎಲ್‌ ಬಂದಾಗಿನಿಂದ ದೇಶದಲ್ಲಿ ಕುಂಟುತ್ತಿದ್ದ ಹಲವು ಕ್ರೀಡೆಗಳು ಈಗ ಪ್ರವರ್ಧಮಾನಕ್ಕೆ ಬರುತ್ತಿವೆ. ಅಷ್ಟೇ ಅಲ್ಲದೇ ಇದೀಗ ಟಿ20 ಮಾದರಿಯಲ್ಲೇ ಟೆಸ್ಟ್‌ ಕ್ರಿಕೆಟ್‌ (Test Cricket) ಆಯೋಜನೆಗೂ ತಯಾರಿ ನಡೆಯುತ್ತಿರುವುದು ನಿಜಕ್ಕೂ ಗಮನಾರ್ಹ.

The TEN Captains have assembled in Mumbai 😎

Up Next: #TATAIPL 2026 Captain’s Photo 😉⏳ pic.twitter.com/X6pt0CmzZu

— IndianPremierLeague (@IPL) March 25, 2026

ಫ್ರಾಂಚೈಸಿ ಸಂಸ್ಕೃತಿ ಬೆಳೆಸಿದ ಐಪಿಎಲ್‌
2006 ರಿಂದಲೇ ಟಿ20 ಚುಟುಕು ಕ್ರಿಕೆಟ್‌ ಶುರುವಾಗಿದ್ದರೂ 2007 ರ ಟಿ20 ವಿಶ್ವಕಪ್‌ ಟೂರ್ನಿ ವರೆಗೆ ಅಷ್ಟೇನು ಜನಪ್ರಿಯತೆ ಪಡೆದಿರಲಿಲ್ಲ. 2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿದ್ದು, ಟಿ20 ಕ್ರಿಕೆಟ್‌ಗೆ ಹಾಕಿದ ಭದ್ರ ಬುನಾದಿ. ಆ ನಂತರ 2008ಲ್ಲಿ ಪದಾರ್ಪಣೆ ಮಾಡಿದ ಐಪಿಎಲ್‌ ಟೂರ್ನಿ ಫ್ರಾಂಚೈಸಿ ಆಧಾರಿತ ಲೀಗ್‌ ಸಂಸ್ಕೃತಿಯನ್ನ ಹುಟ್ಟು ಹಾಕಿತು. ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಮೇರು ಇತಿಹಾಸ ಹೊಂದಿರುವ ಹಾಕಿ, ಟೆನಿಸ್‌, ಬ್ಯಾಡ್ಮಿಂಟನ್‌, ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯೂ ಕಾರಣವಾಯಿತು.

ಐಪಿಎಲ್ 2026 ಸೀಸನ್ ತಂಡಗಳು & ನಾಯಕರು
* ಚೆನ್ನೈ ಸೂಪರ್ ಕಿಂಗ್ಸ್ (CSK) – ರುತುರಾಜ್‌ ಗಾಯಕ್ವಾಡ್
* ದೆಹಲಿ ಕ್ಯಾಪಿಟಲ್ಸ್ (DC)‌ – ಅಕ್ಷರ್‌ ಪಟೇಲ್‌
* ಗುಜರಾತ್ ಟೈಟಾನ್ಸ್ (GT) – ಶುಭಮನ್‌ ಗಿಲ್‌
* ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಅಜಿಂಕ್ಯಾ ರಹಾನೆ
* ಲಕ್ನೋ ಸೂಪರ್ ಜೈಂಟ್ಸ್ (LSG) – ರಿಷಭ್‌ ಪಂತ್‌
* ಮುಂಬೈ ಇಂಡಿಯನ್ಸ್ (MI) – ಹಾರ್ದಿಕ್‌ ಪಾಂಡ್ಯ
* ಪಂಜಾಬ್ ಕಿಂಗ್ಸ್ (PBKS) – ಶ್ರೇಯಸ್‌ ಅಯ್ಯರ್‌
* ರಾಜಸ್ಥಾನ್ ರಾಯಲ್ಸ್ (RR) – ರಿಯಾನ್‌ ಪರಾಗ್‌
* ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ರಜತ್‌ ಪಾಟಿದಾರ್‌
* ಸನ್ ರೈಸರ್ಸ್ ಹೈದರಾಬಾದ್ (SRH) – ಇಶಾನ್‌ ಕಿಶನ್‌

IPL RCB

ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆ
ಇಂದು ರಾಷ್ಟ್ರೀಯ ತಂಡದ ಆಯ್ಕೆಯ ಮಾನದಂಡವನ್ನೇ ಬದಲಿಸಿರುವ ಐಪಿಎಲ್‌, ರಣಜಿ ಸೇರಿದಂತೆ ದೇಶಿಯ ಟೂರ್ನಿಗಳ ಮೇಲಿನ ಅವಲಂಬನೆಯನ್ನೂ ತಗ್ಗಿಸಿದೆ. ಎಲೆ ಮರೆ ಕಾಯಿಯಂತಿದ್ದ ಅದೆಷ್ಟೊ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಐಪಿಎಲ್‌ನಿಂದಾಗಿಯೇ ಭಾರತ ಕ್ರಿಕೆಟ್‌ ತಂಡ ಇಂದು ಜಗತ್ತಿನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ ಅಂದ್ರೆ ತಪ್ಪಾಗಲಾರದು. ಏಕೆಂದ್ರೆ ಐಪಿಎಲ್‌ನಲ್ಲಿ ಅನುಭವಿಗಳು, ವಿದೇಶಿ ಆಟಗಾರನ್ನ ಎದುರಿಸುವ ಪ್ಲೇಯರ್ಸ್‌, ಬಳಿಕ ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದು ಯಶಸ್ಸಿನ ಹಾದಿ ಕಂಡುಕೊಳ್ಳುತ್ತಿದ್ದಾರೆ.

ಮಿಂಚಿದ ಸ್ಟಾರ್ಸ್‌ಗೆ ಐಪಿಎಲ್‌ ಸ್ಫೂರ್ತಿ
2023, 2024ರ ಐಪಿಎಲ್‌ ಆವೃತ್ತಿಯ ಬಳಿಕ ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ಅಭಿಷೇಕ್‌ ಶರ್ಮಾ, ಶಿವಂ ದುಬೆ, ಹರ್ಷಿತ್‌ ರಾಣಾ, ಧ್ರುವ್‌ ಜುರೆಲ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮಾ, ತಿಲಕ್‌ ವರ್ಮಾ, ವರುಣ್‌ ಚಕ್ರವರ್ತಿ ಮೊದಲಾದವರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದುಕೊಳ್ಳಲು ಐಪಿಎಲ್‌ ಸ್ಫೂರ್ತಿಯಾಗಿದೆ. ಅಷ್ಟೇ ಯಾಕೆ? ಗುಜರಾತ್‌ ಟೈಟಾನ್ಸ್‌ ತಂಡವನ್ನ 2 ಆವೃತ್ತಿಗಳಲ್ಲಿ ಮುನ್ನಡೆಸಿದ ಶುಭಮನ್‌ ಗಿಲ್‌ ಟೀಂ ಇಂಡಿಯಾ ಏಕದಿನ, ಟೆಸ್ಟ್‌ ತಂಡದ ನಾಯಕನಾಗೋದಕ್ಕೆ ಐಪಿಎಲ್‌ ಸ್ಫೋರ್ತಿ ಅಂದ್ರೆ ತಪ್ಪಾಗದು. ಇದರಿಂದಾಗಿ ಮೂರು ಮಾದರಿಗಳಲ್ಲೂ ಪ್ರತಿಭಾವಂತ ಆಟಗಾರರರ ದಂಡನ್ನೇ ಹೊಂದಿರುವ ಭಾರತ, ಏಕಕಾಲದಲ್ಲಿ ಎಲ್ಲಾ ಮಾದರಿಗಳಲ್ಲಿ ತಂಡಗಳನ್ನ ಕಣಕ್ಕಿಳಿಸುವ ಸಾಮರ್ಥ್ಯ ಬೆಳೆಸಿಕೊಂಡಿದೆ.

shubman gill

ಹೊಟ್ಟೆ ತುಂಬಿಸಿದ ಐಪಿಎಲ್‌
ಕ್ರೀಡೆಯಿಂದ ಹೊಟ್ಟೆ ತಂಬಲ್ಲ ಎಂಬ ಮಾತುಗಳನ್ನು ಅಕ್ಷರಶಃ ಸುಳ್ಳಾಗಿಸಿರುವ ಐಪಿಎಲ್‌, ಒಂದೇ ಆವೃತ್ತಿಗೆ ಆಟಗಾರನೊಬ್ಬ 1 ರಿಂದ 27 ಕೋಟಿ ರೂಪಾಯಿ ಪಡೆಯುವರೆಗೂ ಆರ್ಥಿಕವಾಗಿ ಆಟಗಾರರನ್ನ ಸೆಳೆದಿದೆ. ಅಲ್ಲದೇ ದೀರ್ಘಾವಧಿ ಮಾದರಿಯ ಟೆಸ್ಟ್‌ ಕ್ರಿಕೆಟ್‌ಗೂ ಹಿಮ್ಮುಖವಾಗಿ ಐಪಿಎಲ್‌ ಹೊಸ ಸ್ವರೂಪ ನೀಡುವಲ್ಲಿ ಪಾತ್ರ ವಹಿಸಿದೆ. ಏಕೆಂದ್ರೆ ದಶಕಗಳ ಹಿಂದೆ ನಿಧಾನಗತಿಯ ಆಟದಿಂದ ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳುತ್ತಿತ್ತು. ಆದ್ರೆ ಇಂದು ಆಟಗಾರರ ಆಕ್ರಮಣಕಾರಿ ಶೈಲಿಯ ಆಟದಿಂದ ಫಲಿತಾಂಶ ಕಾಣುತ್ತಿವೆ.

ದಿಗ್ಗಜರಿಗೆ ಕೊನೇ ಟೂರ್ನಿ ಆಗುತ್ತಾ ಈ ಆವೃತ್ತಿ?
2023ರ ಟೂರ್ನಿ ಆರಂಭದಿಂದಲೂ ನಿವೃತ್ತಿಯ ಸುಳಿವು ಕೊಟ್ಟಿರುವ ಸಿಎಸ್‌ಕೆ ತಂಡದ ಜೀವಾಳ ಎಂ.ಎಸ್‌ ಧೋನಿ (MS Dhoni) ಅವರಿಗೆ 19ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಕೊನೇ ಲೀಗ್‌ ಆಗಲಿದೆ, ಆ ನಂತರ ಮಹಿ ಚೆನ್ನೈ ತಂಡದ ಮೆಂಟರ್‌ ಆಗಿ ಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದ್ರೆ ಮಹಿ ಆಪ್ತರು ಇನ್ನೂ ಎರಡು ಸೀಸನ್‌ ಆಡಬಹುದು ಅನ್ನೋ ಮಾತುಗಳನ್ನಾಡ್ತಿದ್ದಾರೆ. ಮತ್ತೊಂದು ಕಡೆ ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಸ್ಟಾರ್ಸ್‌ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೂ 19ನೇ ಆವೃತ್ತಿ ಕೊನೆಯಾಗುತ್ತಾ? ಅನ್ನೋ ಪ್ರಶ್ನೆಗಳು ಎದ್ದಿವೆ. ಏಕೆಂದ್ರೆ ಈಗಾಗಲೇ ಟಿ20, ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿರುವ ಈ ದಿಗ್ಗಜರು 2027ರ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್‌ ಈ ದಿಗ್ಗಜರ ಪಾಲಿಗೆ ಕೊನೇ ಟೂರ್ನಿಯಾಗಬಹುದು ಅನ್ನೋದು ಮೂಲಗಳ ಮಾತು.

IPL Trophy

ಕ್ರಿಕೆಟ್‌ ಮೀರಿ ಬೆಳೆದ ಐಪಿಎಲ್
ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿ ಉಳಿದುಕೊಂಡಿಲ್ಲ. ಇದು ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ನೆರವಾಗುವ ಬೃಹತ್ ವೇದಿಕೆಯಾಗಿ ಪರಿವರ್ತನೆಗೊಂಡಿದೆ. ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೂ ದಾರಿ ಮಾಡಿಕೊಟ್ಟಿದೆ. ಹೇಗೆ ಅಂತಾ ನೋಡೋದಾದ್ರೆ ಪ್ರತಿ ವರ್ಷ ಐಪಿಎಲ್‌ಗೆ ಸಾಕಷ್ಟು ವಿದೇಶಿ ಆಟಗಾರರು ಬರೋದ್ರಿಂದ ಅವರ ಕುಟುಂಬಗಳು ಹಾಗೂ ಅವರನ್ನೇ ನೋಡಲು ಬರುವ ಅಭಿಮಾನಿಗಳು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿಯುತ್ತಾರೆ. ಹೀಗಾಗಿ ಪ್ರವಾಸೋದ್ಯಮಕ್ಕೂ ಐಪಿಎಲ್‌ ಉತ್ತೇಜನ ನೀಡಿದಂತಾಗಿದೆ. ಜೊತೆಗೆ ಐಪಿಎಲ್ ತಂಡಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುತ್ತವೆ. ಅವರ ಜೊತೆ ಸಾವಿರಾರು ಅಭಿಮಾನಿಗಳು ಕೂಡ ಹೋಗುತ್ತಾರೆ. ಇದರಿಂದ ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕಾಫಿ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗುತ್ತದೆ. ವಿಮಾನಗಳು, ಟ್ಯಾಕ್ಸಿ, ರೈಲು ಮತ್ತು ಬಸ್ಸುಗಳ ಬುಕ್ಕಿಂಗ್‌ ಸಹ ಹೆಚ್ಚಾಗುತ್ತವೆ.

ದೇಶದ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್‌ ಫೀವರ್‌ ಹೆಚ್ಚಳಕ್ಕೆ ಕಾರಣಿಭೂತವಾಗಿರುವ ಈ ಚುಟುಕು ಕ್ರಿಕೆಟ್‌, ಕೇವಲ ಭಾರತದಲ್ಲಲ್ಲದೇ ವಿದೇಶಗಳಲ್ಲೂ ಫ್ರಾಂಚೈಸಿ ಆಧಾರಿತ ಕ್ರಿಕೆಟ್‌ ಲೀಗ್‌ಗಳ ಉದಯಕ್ಕೆ ಕಾರಣವಾಗಿದೆ. ಟಿ20ಯಿಂದ ಆರಂಭವಾದ ಟೂರ್ನಿ ಈಗ ಟಿ10, 100 ಬಾಲ್‌ ಕ್ರಿಕೆಟ್‌ಗೆ ಬಂದುನಿಂತಿದೆ. ಮುಂದಿನ ಹಂತದಲ್ಲಿ 1 ದಿನದ ಟೆಸ್ಟ್‌ ರೂಪಕ್ಕೆ ಇಳಿಯುವ ಚಿಂತನೆಗಳು ನಡೆದಿವೆ. ಒಟ್ಟಿನಲ್ಲಿ ಐಪಿಎಲ್‌ ಟೂರ್ನಿ ಪ್ರತಿ ವರ್ಷ 2 ತಿಂಗಳ ಕಾಲ ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಮನರಂಜನೆ ಉಣಬಡಿಸಲಿದೆ.

Share This Article
Facebook Whatsapp Whatsapp Telegram Copy Link
Cinema News
Dileep Raj Sandalwood
‘ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ದಿಲೀಪ್ ರಾಜ್ ನಿಧನ
Shipa Ganesh
`ಪಿಚ್ಚರ್’ ಚಿತ್ರದ ಗೋಕುಲದ ರಾಧೆ ಹಾಡಿಗೆ ಧ್ವನಿಯಾಗಿ ಗಾಯಕಿಯಾದ ಶಿಲ್ಪಾ ಗಣೇಶ್
Mouni Roy Suraj Nambiar
ಗಂಡನನ್ನು ಅನ್‌ಫಾಲೋ ಮಾಡಿದ ‘ನಾಗಿಣಿ’ ಮೌನಿ ರಾಯ್ – ಡಿವೋರ್ಸ್ ಹಾದಿಯಲ್ಲಿ ಸ್ಟಾರ್ ಜೋಡಿ?
Telugu Actor K.Bharat Kanth
ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ನಟ ದುರ್ಮರಣ

You Might Also Like

gold price hike

ಆಮದು ಸುಂಕ ಏರಿಕೆಯಾದ ಬೆನ್ನಲ್ಲೇ ಚಿನ್ನದ ದರ 8,838 ರೂ., ಬೆಳ್ಳಿ ದರ 18 ಸಾವಿರ ರೂ. ಏರಿಕೆ

17 minutes ago
Gelatin Sticks Found Near PM Modis 2

ಜಿಲೆಟಿನ್ ಕಡ್ಡಿ ಪತ್ತೆ ಕೇಸ್‌ – ಮೋದಿ ಬೆಂಗಳೂರಿಗೆ ಬರುವ ಹಿಂದಿನ ದಿನ ತಮಿಳುನಾಡಿಗೆ ಹೋಗಿದ್ದ ಲೋಹಿತ್‌

1 hour ago
DMK government has left behind a debt of nearly Rs 10 lakh crore TVK Vijay

`ಜನನಾಯಗನ್’ಗೆ ಇಂದು ನಿರ್ಣಾಯಕ ದಿನ – ವಿಶ್ವಾಸಮತ ಅಗ್ನಿಪರೀಕ್ಷೆ ಗೆಲ್ತಾರಾ ವಿಜಯ್?

49 minutes ago
Prateek Yadav 1

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸಹೋದರ ಪ್ರತೀಕ್‌ ಯಾದವ್‌ ನಿಧನ

2 hours ago
  • Astrology
  • Education
  • Fashion
  • Health
  • Belaku
  • Travel