ಅಂದು ಯಶ್ ಶೋ ಆಫ್ ನಟ ಎಂದಿದ್ದ ರಶ್ಮಿಕಾ- ಈಗ ಹೇಳಿದ್ದೇನು ಗೊತ್ತಾ?

Public TV
1 Min Read
rashmika mandanna 1

ಸ್ಯಾಂಡಲ್‌ವುಡ್‌ನ ‘ಕಿರಿಕ್ ಪಾರ್ಟಿ’ (Kirik Party) ಸಿನಿಮಾ ಮೂಲಕ ಸಿನಿ ಪಯಣ ಶುರು ಮಾಡಿದ್ದ ರಶ್ಮಿಕಾ ಮಂದಣ್ಣ(Rashmika Mandanna) ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಸದ್ದು ಮಾಡ್ತಿದ್ದಾರೆ. ಅಂದು ಯಶ್ ಶೋ ಆಫ್ ನಟ ಎಂದಿದ್ದ ರಶ್ಮಿಕಾ, ಇದೀಗ ವರಸೆ ಬದಲಿಸಿದ್ದಾರೆ. ಯಶ್ ಬಗ್ಗೆ ನಟಿ ಕಾಮೆಂಟ್ ಮಾಡಿದ್ದಾರೆ.

rashmika mandanna

‘ಕಿರಿಕ್ ಪಾರ್ಟಿ’ ಚಿತ್ರದ ನಂತರ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ‘ಗೀತಾ ಗೋವಿಂದಂ’ ಚಿತ್ರ ನಂತರ ಸೌತ್‌ನಲ್ಲಿ ನಟಿ ಸೆಟಲ್ ಆಗಿದ್ದಾರೆ. ಅದರಲ್ಲೂ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಶ್ರೀವಲ್ಲಿ ಆಗಿ ಮಿಂಚಿದ ಮೇಲೆ ರಶ್ಮಿಕಾ ಲಕ್ ಬದಲಾಗಿದೆ.

yash 1

ಕೆಲ ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ಜೊತೆ ಸಂದರ್ಶನವೊಂದರಲ್ಲಿ ರಶ್ಮಿಕಾ ಭಾಗಿಯಾಗಿದ್ದರು. ಆಗ ಯಶ್ ಬಗ್ಗೆ ಪ್ರಶ್ನೆ ಎದುರಾಗಿತ್ತು. ಯಶ್‌ಗೆ ಶೋ ಆಫ್ ನಟ ಎಂದು ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದರು. ಈ ಹೇಳಿಕೆ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಇದನ್ನೂ ಓದಿ:ಪ್ಯಾರಿಸ್‌ಗೆ ಹಾರಿದ Love ಬರ್ಡ್ಸ್ ಡಾರ್ಲಿಂಗ್‌ ಕೃಷ್ಣ- ಮಿಲನಾ

rashmika mandanna 1

ಇದೀಗ ಟ್ವೀಟ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆ ಪ್ರಶ್ನಾವಳಿ ನಡೆಸಿದ್ದಾರೆ. ಮತ್ತೆ ಯಶ್ ಬಗ್ಗೆ ರಶ್ಮಿಕಾಗೆ ಪ್ರಶ್ನೆ ಕೇಳಲಾಗಿದೆ. ಆದರೆ ಯಶ್ (Yash) ಸೂಪರ್ ಸ್ಟಾರ್ (Super Star) ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ಉತ್ತರ ರಾಕಿ ಭಾಯ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Share This Article