ದಕ್ಷಿಣ ಭಾರತದ `ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಮತ್ತೆ ಹೊಸ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಇದೀಗ ಫ್ಯಾನ್ ಬಳಿ ತಮ್ಮ ಬಾಡಿಗಾರ್ಡ್ ರೇಗಾಡಿರೋದನ್ನ ನೋಡಿ ರಶ್ಮಿಕಾ ಫುಲ್ ಗರಂ ಆಗಿದ್ದಾರೆ.
ಕನ್ನಡ ಚಿತ್ರರಂಗದಿಂದ ಸಿನಿ ಜರ್ನಿ ಶುರು ಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ನಲ್ಲಿ ಬಲಗಾಲಿಟ್ಟು ಬಂದಿದ್ದಾರೆ. ಪಂಚ ಭಾಷಾ ನಟಿಯಾಗಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಬ್ಯೂಟಿ ಜತೆ ಪ್ರತಿಭೆಯಿರೋ ರಶ್ಮಿಕಾ ಮಂದಣ್ಣಗೆ ಅಪಾರ ಅಭಿಮಾನಿಗಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಸಾಕಷ್ಟು ಅಭಿಮಾನಿಗಳು ರಶ್ಮಿಕಾರನ್ನ ಭೇಟಿ ಮಾಡಲು ಕಾಯ್ತಿದ್ದಾರೆ. ಹೀಗಿರುವಾಗ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿದ್ದರು. ಈ ವೇಳೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಆಗ ಅಭಿಮಾನಿ ಜೊತೆ ಬಾಡಿಗಾರ್ಡ್ ರೇಗಾಡಿದಕ್ಕೆ ರಶ್ಮಿಕಾ ಮಂದಣ್ಣ ಗರಂ ಆಗಿದ್ದಾರೆ.
View this post on Instagram
ನಟಿ ರಶ್ಮಿಕಾ ಶೂಟಿಂಗ್ಗಾಗಿ ಮುಂಬೈನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪಾಪರಾಜಿಗಳು ಅವರ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಭಿಮಾನಿ, ರಶ್ಮಿಕಾ ಜೊತೆ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದರು. ರಶ್ಮಿಕಾ ಬಳಿ ಬಂದ ಫ್ಯಾನ್ ಒಬ್ಬನನ್ನು ಬಾಡಿಗಾರ್ಡ್ ದೂರ ತಳ್ಳಲು ಪ್ರಯತ್ನಿಸಿದ್ದ. ಇದಕ್ಕೆ ರಶ್ಮಿಕಾ ಅಸಮಾಧಾನಗೊಂಡಿದ್ದಾರೆ. ಹೀಗೆ ಮಾಡಬೇಡಿ ಅಂತಾ ಹೇಳಿ ಫ್ಯಾನ್ ಜೊತೆ ರಶ್ಮಿಕಾ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಪುಪ್ಪ ನಟಿಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.