ದೂರದ ರೋಮ್‌ಗೆ (Rome) ಒಟ್ಟಿಗೆ ವೆಕೇಷನ್ ಎಂಜಾಯ್ ಮಾಡಲು ಹೋಗಿದ್ದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೋಡಿ ಇದೀಗ ಒಟ್ಟಿಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ರೋಮ್‌ನಿಂದ ಒಟ್ಟಿಗೆ ಬರುವಾಗ ಸಿಕ್ಕಾಕ್ಕೊಂಡಿದ್ದಾರೆ.
ರೋಮ್‌ಗೆ ಹೋಗುವಾಗ ಇಬ್ಬರೂ ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸೆಪರೇಟ್ ಆಗಿ ಕಾಣಿಸ್ಕೊಂಡಿದ್ರು. ಇದೀಗ ವಾಪಸ್ ಬರುವಾಗ ಇಬ್ಬರೂ ಜೊತೆಯಲ್ಲಿಯೇ ಆಗಮಿಸಿ, ಕ್ಯಾಮೆರಾ ಎದುರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಇದನ್ನೂ ಓದಿ: ನ್ಯೂಇಯರ್ ಸೆಲೆಬ್ರೇಷನ್- ವಿದೇಶಕ್ಕೆ ಹಾರಿದ ವಿಜಯ್, ರಶ್ಮಿಕಾ
ಹೊಸ ವರ್ಷಾಚರಣೆಗಾಗಿ ವಿಜಯ್ ಹಾಗೂ ರಶ್ಮಿಕಾ ಜೋಡಿ ಆಪ್ತೇಷ್ಠರ ಸಮೇತ ರೋಮ್‌ಗೆ ಹೋಗಿದ್ದರು. ಅಲ್ಲಿ ಹತ್ತಾರು ದಿನಗಳು ಎಂಜಾಯ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಸಹೋದರ ಕೂಡ ಇದ್ರು. ಇನ್ನು ಫ್ರೆಂಡ್ಸ್ ಜೊತೆ ನ್ಯೂ ಇಯರ್ ಸೆಲೆಬ್ರೇಷನ್‌ನ್ನ ರೋಮ್ ದೇಶದಲ್ಲೇ ಆಚರಿಸಿರುವ ಭಾವಿ ದಂಪತಿ ಇದೀಗ ಒಟ್ಟಾಗಿ ರೋಮ್‌ನಿಂದ ಹೈದ್ರಾಬಾದ್‌ಗೆ ಬಂದಿಳಿದು ಸಿಕ್ಕಿಬಿದ್ದಿದ್ದಾರೆ.
ಇಬ್ಬರೂ ಮಾಸ್ಕ್ ಧರಿಸಿದ್ದರೂ ಕೂಡ ಕ್ಯಾಮರಾ ಕಣ್ಣಲ್ಲಿ ಸ್ಪಷ್ಟವಾಗೇ ಕಾಣಿಸಿಕೊಂಡಿದ್ದಾರೆ. ಇನ್ನು ಫೆಬ್ರವರಿ 26ಕ್ಕೆ ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಆಗಲಿದ್ದು, ಅದರ ಸಿದ್ಧತೆಯಲ್ಲಿ ತೊಡಗಿದೆ ಜೋಡಿ. ಅದಕ್ಕೂ ಮುನ್ನ ವಿದೇಶದಲ್ಲಿ ಬ್ಯಾಚುಲರೇಟ್ ಪಾರ್ಟಿ/ನ್ಯೂ ಇಯರ್ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಏನಿಲ್ಲ ಏನಿಲ್ಲ ಎನ್ನುತ್ತಲೇ ಇದ್ದ ಈ ಜೋಡಿಯ ಪ್ರೇಮಕಥೆ ಈಗ ಒಂದೊಂದಾಗೇ ಎಲ್ಲವೂ ಸ್ಪಷ್ಟವಾಗುತ್ತಿದೆ.ಇದನ್ನೂ ಓದಿ: ವಿಜಯ್ ದೇವರಕೊಂಡ-ರಶ್ಮಿಕಾ ನಟನೆಯ ಸಿನಿಮಾ ಹಿಂದಿಯಲ್ಲಿ ರಿಮೇಕ್

