ಬಿಗ್‌ಬಾಸ್ (Bigg Boss) ಫಿನಾಲೆಗೆ ಇನ್ನೆರಡೇ ವಾರ ಬಾಕಿ ಇದೆ. ಟಾಪ್-5 ನಲ್ಲಿ ಯಾರು ಇರ್ತಾರೆ ಅನ್ನುವ ಲೆಕ್ಕಾಚಾರಗಳು ಮನೆಯಲ್ಲಿ ನಡೆದಿವೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ತಾರಕಕ್ಕೇರಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮಾರಾಮಾರಿಯೇ ನಡೆದುಹೋಗ್ತಿದೆ. ರಕ್ಷಿತಾ (Rakshita) ವಿರುದ್ಧ ಕಿಡಿಕಾರಿದ್ದಾರೆ ರಾಶಿಕಾ (Rashika). ಅದನ್ನ ಪ್ರಶ್ನೆ ಮಾಡಿದ ಗಿಲ್ಲಿಯನ್ನೂ ಟಾರ್ಗೆಟ್ ಮಾಡಿ ಮಾತಾಡಿದ್ದಾರೆ.
ಸೀಸನ್-12ರ ಫಿನಾಲೆ ಸನಿಹದಲ್ಲಿದ್ದು, ಬಿಗ್‌ಬಾಸ್ ಮನೆಯ ನಾಮಿನೇಷನ್ ಪ್ರಕ್ರಿಯೆ ಕೂಡಾ ಮುಗಿದಿದೆ. ಈ ವಾರ ಮನೆಯಿಂದ ಆಚೆ ಬರುವವರ‍್ಯಾರು? ಮನೆಯಲ್ಲಿ ಉಳಿಯುವವರು ಯಾರು? ಎನ್ನುವ ಲೆಕ್ಕಾಚಾರಗಳು ಕೂಡಾ ಶುರುವಾಗಿವೆ. ಇದರ ಮಧ್ಯೆ ಗಿಲ್ಲಿ (Gilli) ಈ ಬಾರಿಯ ಬಿಗ್‌ಬಾಸ್ ಕಪ್ ಎತ್ತಲಿದ್ದಾರೆ ಎನ್ನೋ ಜನಾಭಿಪ್ರಾಯ ಶುರುವಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ನೂರು ದಿನಗಳ ಸಂಭ್ರಮ; ಆಟ ಇಲ್ಲಿಗೆ ಮುಗಿದಿಲ್ಲ!
ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/Apv7eoUwFz
— Colors Kannada (@ColorsKannada) January 6, 2026
ಬಿಗ್‌ಬಾಸ್, ಟಾಸ್ಕ್‌ಗಳ ಮೇಲೆ ಟಾಸ್ಕ್‌ಗಳನ್ನು ಕೊಡುತ್ತಿದ್ದಾರೆ. ತಂಡ ಮಾಡಿಕೊಳ್ಳುವಂತೆ ಬಿಗ್‌ಬಾಸ್ ಹೇಳಿದ ಸಂದರ್ಭದಲ್ಲಿ ರಾಶಿಕಾಗೆ ರಕ್ಷಿತಾರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ರಕ್ಷಿತಾ ಮತ್ತು ರಾಶಿಕಾ ನಡುವೆ ಜಗಳವಾಗಿದೆ. ಆಗ ರಕ್ಷಿತಾ ಪರ ನಿಂತ ಗಿಲ್ಲಿ ಮೇಲೂ ರಾಶಿಕಾ ಕೂಗಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.

