ಲುವಾಂಡಾ: ಅಂಗೋಲಾದಲ್ಲಿ ಗಣಿಗಾರಿಕೆ ಮಾಡುತ್ತಿದ್ದ ವೇಳೆ ಅಪರೂಪದ ಪ್ಯೂರ್ ಪಿಂಕ್ ಬಣ್ಣದ ವಜ್ರವೊಂದು ಪತ್ತೆಯಾಗಿದೆ. ಈ ಬೆಲೆಬಾಳುವ ವಜ್ರ 300 ವರ್ಷಗಳಲ್ಲಿಯೇ ಕಂಡು ಬಂದ ಅತಿದೊಡ್ಡ ವಜ್ರವಾಗಿದೆ.
170 ಕ್ಯಾರೆಟ್ ತೂಕದ ಪಿಂಕ್ ವಜ್ರವನ್ನು ದಿ ಲುಲೋ ರೋಸ್ ಎಂದು ಕರೆಯಲಾಗುತ್ತದೆ. ಇದು ಅಂಗೋಲಾದ ಲುಲೋ ಮೈನ್ಸ್‍ನಲ್ಲಿ ಪತ್ತೆಯಾಗಿದ್ದು, ದೇಶದ ಈಶಾನ್ಯ ಭಾಗದಲ್ಲಿ ಹೆಚ್ಚು ವಜ್ರ ದೊರೆಯುತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಇದುವರೆಗೂ ದೊರೆತ ಅತಿದೊಡ್ಡ ಪಿಂಕ್ ಬಣ್ಣದ ವಜ್ರಗಳ ಪಟ್ಟಿಯಲ್ಲಿ ಇದು ಸಹ ಸ್ಥಾನ ಪಡೆಯುತ್ತದೆ ಎಂದು ಲ್ಯೂಕಾಪಾ ವಜ್ರದ ಕಂಪನಿ ಹೂಡಿಕೆದಾರು ತಿಳಿಸಿದ್ದಾರೆ.
Advertisement
Advertisement
ಟೈಪ್ IIa ಎಂಬ ಈ ವಜ್ರ ನೈಸರ್ಗಿಕ ಕಲ್ಲುಗಳಲ್ಲಿ ದೊರೆಯುವ ಅಪರೂಪದ ಹಾಗೂ ಅತಿ ಶುದ್ಧವಾದ ವಜ್ರವಾಗಿದ್ದು, ಈ ವಜ್ರ ದೊರೆತಿರುವುದನ್ನು ಅಂಗೋಲಾ ಸರ್ಕಾರ ಸಹ ಸ್ವಾಗತಿಸಿದ್ದು, ಈ ಗಣಿಗಾರಿಕೆಯಲ್ಲಿ ಅಲ್ಲಿನ ಸರ್ಕಾರ ಸಹ ಪಾಲುದಾರರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸರ್ಕಾರಕ್ಕೆ ಜನೋತ್ಸವದ ಬದಲು ಜನಾಕ್ರೋಶದ ದರ್ಶನವಾಗಿದೆ – ಕಾರ್ಯಕ್ರಮ ರದ್ದುಗೊಳಿಸಿದ್ದು ಮೃತನ ಮೇಲಿನ ಗೌರವದಿಂದಲ್ಲ: ಕಾಂಗ್ರೆಸ್
Advertisement
ಈ ಗುಲಾಬಿ ವಜ್ರದಿಂದ ವಿಶ್ವದಲ್ಲೇ ವಜ್ರದ ಉದ್ಯಮದಲ್ಲಿ ಅಂಗೋಲಾ ಪ್ರಮುಖ ದೇಶವಾಗಿ ಹೊರಹೊಮ್ಮಿದೆ. ಆಟಗಾರನಾಗಿ ಪ್ರದರ್ಶಿಸುವುದನ್ನು ಮುಂದುವರೆಸಿದೆ. ಬಹುಶಃ ಈ ವಜ್ರವನ್ನು ಅಂತರರಾಷ್ಟ್ರೀಯ ಟೆಂಡರ್‌ನಲ್ಲಿ ಅಚ್ಚರಿ ಪಡುವಂತಹ ಬೆಲೆಗೆ ಮಾರಾಟ ಮಾಡಬಹುದು. ದಿ ಲುಲೋ ರೋಸ್‍ನ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ವಜ್ರವನ್ನು ಕತ್ತರಿಸಿ ಪಾಲಿಶ್ ಮಾಡಬೇಕಾಗಿದೆ. ಅಲ್ಲದೇ ಈ ಪ್ರಕ್ರಿಯೆಯಲ್ಲಿ ಬೆಲೆಬಾಳುವ ಸ್ಟೋನ್ ತನ್ನ ತೂಕದ 50 ಪ್ರತಿಶತವನ್ನು ಕಳೆದುಕೊಳ್ಳುತ್ತದೆ ಅಂತ ಹೇಳಲಾಗುತ್ತಿದೆ ಎಂದು ಅಂಗೋಲಾದ ಖನಿಜ ಸಂಪನ್ಮೂಲ ಸಚಿವ ಡೈಮಂಟಿನೋ ಅಜೆವೆಡೊ ಹೇಳಿದ್ದಾರೆ.
Advertisement
2017 ರಲ್ಲಿ ಹಾಂಗ್ ಕಾಂಗ್‍ನಲ್ಲಿ ನಡೆದ ಹರಾಜಿನಲ್ಲಿ 59.6 ಕ್ಯಾರೆಟ್ ಪಿಂಕ್ ಸ್ಟಾರ್ ಅನ್ನು 71. 2 ಮಿಲಿಯನ್ ಅಮೆರಿಕ ಡಾಲರ್‌ಗೆ ಮಾರಾಟ ಮಾಡಲಾಗಿತು. ಇದು ಇಲ್ಲಿಯವರೆಗೂ ಮಾರಾಟವಾದ ಅತ್ಯಂತ ದುಬಾರಿ ವಜ್ರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಮೀಸಲಾತಿ ಪ್ರಕಟಿಸಿ, ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಕೋರ್ಟ್