ಧಾರವಾಡ: ಜಗತ್ತಿನಲ್ಲಿ ಇತ್ತೀಚೆಗೆ ಅತೀ ಹೆಚ್ಚು ಜನಪ್ರಿಯವಾಗಿರುವ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಧಾರವಾಡ ನಾರಾಯಣ ಹೃದಯಾಲಯ ಯಶಸ್ವಿಯಾಗಿದೆ. ವಿಶೇಷ ಅಂದ್ರೆ ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯತ್ನ ಮಾಡಿ ಸಾಧನೆ ಮಾಡಿದ ಆಸ್ಪತ್ರೆ ಎಂದು ಎನಿಸಿಕೊಂಡಿದೆ.
ಈ ಚಿಕಿತ್ಸೆ ಮೂಲಕ ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ ಐದು ಜನಕ್ಕೆ ಚಿಕಿತ್ಸೆ ನೀಡಿ ನಾರಾಯಣ ಹೃದಯಾಲಯ ಹೊಸ ಜೀವನ ಕಲ್ಪಿಸಿದೆ. 28 ವರ್ಷದ ಸಾವಿತ್ರಿ ಕಮ್ಮಾರ್, 40 ವರ್ಷದ ಲಕ್ಷ್ಮಿದೇವಿ ಲೋಕನಗೌಡರ, 21 ವರ್ಷದ ವಿಶಾಲ್ ದೊಡ್ಡಮನಿ ಮತ್ತು ವಿಶೇಷ ಅಂದ್ರೆ 4 ವರ್ಷದ ಚೇತನ್ ಎಂಬಾತನಿಗೆ ಈ ಚಿಕಿತ್ಸೆ ಮೂಲಕ ಗುಣಪಡಿಸಿ ವೈದ್ಯ ಲೋಕದ ಸವಾಲು ಮೆಟ್ಟಿನಿಂತಿದ್ದಾರೆ.
ಬೆಂಗಳೂರಿನ ಹೆಸರಾಂತ ವೈದ್ಯ ಡಾ. ರವಿಶಂಕರ್ ಶೆಟ್ಟಿ, ಧಾರವಾಡದ ಡಾ. ಷಣ್ಮುಖ ಹಿರೇಮಠ್, ಡಾ. ವಿವೇಕಾನಂದ ಗಜಪತಿ, ಡಾ. ಪ್ರಮೋದ್ ಹೂನ್ನೂರ ಅವರನ್ನೊಳಗೊಂಡ ತಂಡ ಈ ವಿನೂತನ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ.
ಈ ಚಿಕಿತ್ಸೆ ವಿಧಾನದ ಬಗ್ಗೆ ವಿವರಿಸಿದ ವೈದ್ಯ ಡಾ. ರವಿಶಂಕರ್, ಈ ವಿಧಾನದಲ್ಲಿ ಕೇವಲ ಪಕ್ಕೆಲುಬಿನ ಬದಿಯಲ್ಲಿ ಸಣ್ಣ ರಂಧ್ರವನ್ನು ಕೊರೆದು ಶಸ್ತ್ರ ಚಿಕಿತ್ಸೆ ನಿರ್ವಹಿಸಲಾಗುತ್ತದೆ. ಜೊತೆಗೆ ಹೃದಯ ಮತ್ತು ಶ್ವಾಸಕೋಶದ ಬೈಪಾಸ್ ಯಂತ್ರದ ನೆರವಿನಲ್ಲಿ ರಕ್ತನಾಳ ಹಾಗೂ ಕಿರು ರಕ್ತನಾಳಗಳನ್ನು ಕೆಲವೊಮ್ಮೆ ಆಂತರಿಕ ನರಸಮೂಹಕ್ಕೆ ಚಿಕಿತ್ಸೆ ನೀಡಲಾಗುತ್ತೆ ಎಂದು ವಿವರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv