ಲಂಡನ್: ವೇಶ್ಯೆಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಾಂಡೋಮ್ ತೆಗೆದು ಹಾಕಿದ್ದಕ್ಕೆ ಇಂಗ್ಲೆಂಡಿನ ಬೊನ್ರ್ಮೌತ್ ಕೋರ್ಟ್ ವ್ಯಕ್ತಿಯೊಬ್ಬನಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ವ್ಯಕ್ತಿಯನ್ನು 35 ವರ್ಷದ ಲೀ ಹಾಗ್ಬೆನ್ ಎಂದು ಗುರುತಿಸಲಾಗಿದೆ. ಮಹಿಳೆ ಕಾಂಡೋಮ್ ಬಳಸುವಂತೆ ವ್ಯಕ್ತಿಗೆ ಸೂಚಿಸಿದ್ದರು. ಆಕೆಯ ಮಾತನ್ನು ನಿರ್ಲಕ್ಷಿಸಿ ಮಹಿಳೆಯ ಜೊತೆ ಆತ ಹೋಟೆಲ್ ರೂಮಿನಲ್ಲಿ ಸಂಬಂಧ ಹೊಂದಿದ್ದನು.
Advertisement
Advertisement
ಏನಿದು ಪ್ರಕರಣ?
ಹಾಗ್ಬೆನ್ ಪೋರ್ನ್ ಸೈಟ್‍ನ ಮೂಲಕ ಮಹಿಳೆಯನ್ನು ಪರಿಚಯಿಸಿಕೊಂಡಿದ್ದನು. ಬಳಿಕ ಜನವರಿ 19 ರಂದು ಬೊನ್ರ್ಮೌತ್‍ನಲ್ಲಿರುವ ಹೋಟೆನ್‍ನಲ್ಲಿ ಭೇಟಿಯಾಗಿದ್ದರು. ಮಹಿಳೆ ಮೊದಲೇ ಸುರಕ್ಷತೆ ಬಳಸುವಂತೆ ಸೂಚನೆ ನೀಡಿದ್ದಳು. ಆದರೂ ಹಾಗ್ಬೆನ್, ನಿಯಮ ಮೀರಿದ್ದಾನೆ. ಸೆಕ್ಸ್ ಮಾಡುವ ವೇಳೆ ಕಾಂಡೋಮ್ ತೆಗೆದು ಹಾಕಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಕಾಂಡೋಮ್ ಬಳಸುವಂತೆ ಪದೇ ಪದೇ ಹೇಳಿದ್ದಾಳೆ. ಆದರೂ ಆತ ಮಹಿಳೆ ಮಾತನ್ನು ಕೇಳಿರಲಿಲ್ಲ. ಕೊನೆಗೆ ಮಹಿಳೆ ಸೆಕ್ಸ್ ಮಾಡಲು ನಿರಾಕರಿಸಿದ್ದಾಳೆ. ಆಗ ಹಾಗ್ಬೆನ್ ಮಹಿಳೆಗೆ ಹೊಡೆದು ದೈಹಿಕ ಸಂಬಂಧ ಬೆಳೆಸಿದ್ದಾನೆ.
Advertisement
Advertisement
ಸುಮಾರು 2 ಗಂಟೆಯವರೆಗೂ ಮಹಿಳೆಯ ಜೊತೆ ಕಾಲ ಕಳೆದು ಹಣ ಕೊಡದೆ ಅಲ್ಲಿಂದ ಹೋಗಿದ್ದಾನೆ. ನಂತರ ಹಾಗ್ಬೆನ್ ನಿಯಮಗಳನ್ನು ಬ್ರೇಕ್ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದಳು. ಮರುದಿನ ಆತನನ್ನು ಅತ್ಯಾಚಾರ ಮಾಡಿದ್ದಾನೆ ಎಂಬ ಅನುಮಾನದ ಮೇರೆಗೆ ಪೊಲೀಸರು ಅರೆಸ್ಟ್ ಮಾಡಿದ್ದರು. ಮೊದಲಿಗೆ ಹಾಗ್ಬೆನ್ ಅತ್ಯಾಚಾರದ ಆರೋಪವನ್ನು ತಳ್ಳಿ ಹಾಕಿದ್ದನು. ಆದರೆ ವೈದ್ಯಕೀಯ ಪರೀಕ್ಷೆಯ ವೇಳೆ ಆತನ ಮೇಲಿದ್ದ ಅರೋಪ ಸಾಬೀತಾಗಿತ್ತು.
ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ನಿನ್ನ ಅಜ್ಜ-ಅಜ್ಜಿಯನ್ನು ಕೊಲೆ ಮಾಡುವುದಾಗಿ ಮಹಿಳೆಗೆ ಆರೋಪಿ ಬೆದರಿಸಿದ್ದನು. ವಿಚಾರಣೆ ವೇಳೆಯೂ ಕೂಡ ಆತ ನ್ಯಾಯಾಧೀಶರಿಗೂ ಶೂಟ್ ಮಾಡುವುದಾಗಿ ಧಮ್ಕಿ ಹಾಕಿದ್ದನು ಎಂದು ವರದಿಯಾಗಿದೆ. ಕೊನೆಗೆ ಕೋರ್ಟ್ ಆತನಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.