ಕೊಲಂಬೊ: ಸ್ವಯಂ ಘೋಷಿತ ದೇವಮಾನವ ಹಾಗೂ ಅತ್ಯಾಚಾರ ಆರೋಪ ಹೊತ್ತಿರುವ ನಿತ್ಯಾನಂದ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದು, ಶ್ರೀಲಂಕಾದಿಂದ ವೈದ್ಯಕೀಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ದೇಶವನ್ನೇ ತೊರೆದು ಈಕ್ವೆಡಾರ್ ದ್ವೀಪದಲ್ಲಿ ನೆಲೆಸಿರುವ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದ ತನಗೆ ತುರ್ತು ವೈದ್ಯಕೀಯ ನೆರವು ನೀಡುವಂತೆ ಲಂಕಾ ಅಧ್ಯಕ್ಷರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯುಕೆ ಹಿಂದಿಕ್ಕಿ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದ ಭಾರತ
Advertisement
Advertisement
ಕಳೆದ ಆಗಸ್ಟ್ 7ರಂದೇ ನಿತ್ಯಾನಂದ ಕೈಲಾಸ ಸಾರ್ವಭೌಮ ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯದ ಕೊರೆತೆಯನ್ನು ಉಲ್ಲೇಖಿಸಿ ಲಂಕಾ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ನಾನು ಅಸ್ವಸ್ಥನಾಗಿದ್ದೇನೆ, ಜೀವಕ್ಕೆ ಅಪಾಯವಿದ್ದು, ತುರ್ತು ಚಿಕಿತ್ಸೆಯ ಅವಶ್ಯಕತೆಯಿದೆ. ಕೂಡಲೇ ವೈದ್ಯಕೀಯ ಅಗತ್ಯತೆಗಳನ್ನು ಪೂರೈಸುವಂತೆ ಲಂಕಾ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಅವರಿಗೆ ಕೋರಿದ್ದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಗಲಾಟೆ – ಹಿಂದೂ ಯುವಕರಿಗೆ ಗಾಯ, ಮೂವರು ವಶಕ್ಕೆ
Advertisement
Advertisement
ನಿತ್ಯಾನಂದ ಬರೆದ ಪತ್ರದಲ್ಲಿ ಏನಿತ್ತು?
ಹಿಂದೂ ಧರ್ಮದ ಪರಮ ಪೀಠಾಧಿಪತಿ ಶ್ರೀ ನಿತ್ಯಾನಂದ ಪರಮಶಿವಂ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದ್ದು, ತುರ್ತು ವೈದ್ಯಕೀಯ ಸೇವೆಗಳ ಅಗತ್ಯವಿದೆ. ಪ್ರಸ್ತುತ ಕೈಲಾಸದಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಖಾಲಿಯಾಗುತ್ತಿದ್ದು, ಆದ್ದರಿಂದ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಇನ್ನಷ್ಟು ಮೂಲ ಸೌಕರ್ಯಗಳ ಅಗತ್ಯವಿದೆ. ನಿತ್ಯಾನಂದ ತೀವ್ರವಾಗಿ ಅಸ್ವಸ್ಥಗೊಂಡಿರುವುದರಿಂದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದು, ಕೂಡಲೇ ಸಹಾಯ ಮಾಡುವಂತೆ ಪತ್ರ ಬರೆದಿದ್ದರು.
ಹೂಡಿಕೆ ಮಾಡೋದಾಗಿ ಆಫರ್: ಅಲ್ಲದೇ ಈಕ್ವೆಡಾರ್ ದ್ವೀಪವೊಂದನ್ನು ಖರೀದಿಸಿ ಅಲ್ಲಿಯೇ ಕೈಲಾಸ ದೇಶ ನಿರ್ಮಿಸಿರುವ ನಿತ್ಯಾನಂದ ಇದೀಗ ಲಂಕಾ ಸರ್ಕಾರ ವೈದ್ಯಕೀಯ ನೆರವು ನೀಡಿವುದಾದರೇ ಅಲ್ಲಿಯೇ ಲಕ್ಷಾಂತರ ಮೌಲ್ಯದ ಡಾಲರ್ ಹೂಡಿಕೆ ಮಾಡುವುದಾಗಿ ಆಫರ್ ನೀಡಿದ್ದಾರೆ.