DistrictsKarnatakaKolarLatestMain Post

ಗಣೇಶ ವಿಸರ್ಜನೆ ವೇಳೆ ಗಲಾಟೆ – ಹಿಂದೂ ಯುವಕರಿಗೆ ಗಾಯ, ಮೂವರು ವಶಕ್ಕೆ

ಕೋಲಾರ: ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆಯಾದ ಪರಿಣಾಮ ಎರಡೂ ಗುಂಪಿನ ಇಬ್ಬರಿಗೆ ಗಾಯಗಳಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ನೂಗಲಬಂಡೆ ಬಡಾವಣೆಯಲ್ಲಿಂದು ಸಂಜೆ ಈ ಘಟನೆ ನಡೆದಿದ್ದು. ಪರಿಣಾಮ ಮೂವರನ್ನು ಮುಳಬಾಗಲು ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಣೇಶ ಮೂರ್ತಿ ಮೆರವಣಿಗೆ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಯುವಕರನ್ನು ಪ್ರಶ್ನೆ ಮಾಡುತ್ತಿದ್ದ ವೇಳೆ ಅಲ್ಲೆ ಪಕ್ಕದಲ್ಲಿದ್ದ ಮತ್ತೋರ್ವ ಜಾಗ ಬಿಡಲಿಲ್ಲ ಎನ್ನುವ ವಿಚಾರದಲ್ಲಿ ಗಲಾಟೆ ಮಾಡಿದ್ದಾನೆ. ಈ ವೇಳೆ ಎರಡು ಗುಂಪಿನ ಯುವಕರ ಮಧ್ಯೆ ಗಲಾಟೆಯಾಗಿದ್ದು. ಹಿಂದೂ ಯುವಕರಿಬ್ಬರಿಗೆ ಗಾಯವಾಗಿದೆ. ಗಾಯಳುಗಳನ್ನು ಮನೋಜ್ (19) ಹಾಗೂ ಸುರೇಂದ್ರ (20) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಾಜ್ಯದ 31 ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ – ಯಾವ ಜಿಲ್ಲೆಯ ಯಾರಿಗೆ ಪ್ರಶಸ್ತಿ?

ಹಲ್ಲೆ ಮಾಡಿದ ನೂಗಲಬಂಡೆಯ ಅಕ್ಬರ್, ಅಫ್ಜಲ್, ಯಾಸಿನ ಪಾಷ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನೂಗಲಬಂಡೆ ಗಲಾಟೆ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307, 142, 143 ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ದಂಡ ವಿಧಿಸಲು ಹೋದ ಮಾರ್ಷಲ್‌ಗಳ ಮೇಲೆ ರಿಕ್ಷಾ ಹತ್ತಿಸಿದ್ರು

Live Tv

Leave a Reply

Your email address will not be published.

Back to top button