ನವದೆಹಲಿ: ಸುರಕ್ಷಿತ ಲೈಂಗಿಕತೆ, ಹೆಚ್‍ಐವಿ ಸೋಂಕು ಮತ್ತು ಜನನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ವಿಶ್ವಜನಸಂಖ್ಯಾ ದಿನ ಅಂದ್ರೆ ಬುಧವಾರ ‘ಕಾಂಡೋಮ್ ಬೋಲೆ’ ಹ್ಯಾಶ್ ಟ್ಯಾಗ್ ನೊಂದಿಗೆ ಬಿಡುಗಡೆಯಾಗಿರುವ ಹಾಡೊಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ (ಫಿಎಫ್‍ಐ) ಮತ್ತು ‘ಮೈ ಕುಛ್ ಬಿ ಕರ್ ಕತೀ ಹೂಂ’ ಜಂಟಿಯಾಗಿ ಕಾಂಡೋಮ್ ಬಳಕೆ ಜಾಗೃತಿಯ ‘ಕಾಂಡೋಮ್ ರ‍್ಯಾಪ್’ ಶೀರ್ಷಿಕೆಯಡಿಯಲ್ಲಿ ಹಾಡನ್ನು ಬಿಡುಗಡೆಗೊಳಿಸಿವೆ. ಈ ಹಾಡಿನ ಮೂಲಕ ಕಾಂಡೋಮ್ ಬಳಕೆ ಜಾಗೃತಿಯನ್ನು ಮೂಡಿಸಲು ಎರಡೂ ಸಂಘಟನೆಗಳು ಮುಂದಾಗಿವೆ.
ಗರ್ಭನಿರೋಧಕ ವಿಧಾನದ ಬಳಕೆಯ ಸಂಬಂಧ ಸಮಾಜದ ಎಲ್ಲ ವರ್ಗದವರಿಗೆ ಮಾಹಿತಿಯನ್ನು ಹಲವು ವರ್ಷಗಳಿಂದ ನೀಡುತ್ತಾ ಬರಲಾಗುತ್ತಿದೆ. ಗರ್ಭನಿರೋಧಕ ಜಾಹೀರಾತುಗಳು ಕೇವಲ ಮಹಿಳೆಯರಿಗೆ ಮಾತ್ರ ಅನ್ವಯ ಎಂಬ ಭಾವನೆ ಕೆಲವರಲ್ಲಿ ಮೂಡಿದೆ. ಪುರುಷರು ಸಹ ಕಾಂಡೋಮ್ ಬಳಕೆಯ ಮೂಲಕ ಜನನ ನಿಯಂತ್ರಣ ಮಾಡಬಹುದು. ಜನನ ನಿಯಂತ್ರಣದ ಕುರಿತು ಹಲವು ಜಾಹೀರಾತು, ಜಾಗೃತಿ ಕಾರ್ಯಕ್ರಮಗಳಿವೆ. ಈ ಹಾಡನ್ನು ಪುರುಷರಿಗಾಗಿ ರಚಿಸಲಾಗಿದೆ ಎಂದು ಪಿಎಫ್‍ಐ ಕಾರ್ಯಕಾರಿ ನಿರ್ದೇಶಕ ಪೂನಮ್ ಮುಟರೇಜಾ ತಿಳಿಸಿದ್ದಾರೆ.
Condom Bole | Let’s talk about male participation in family planning: https://t.co/EluT8JeKF4 #CondomBole #Mastpitara #familyplanning #FridayFeeling @BMGFIndia @OfficialRECF @MoHFW_INDIA @DDNational @PFI3 #condom pic.twitter.com/0iQJJ2A8ZA
— Main Kuch Bhi Kar Sakti Hoon (@MKBKSH_) July 12, 2019
ಹಾಡಿನಲ್ಲಿ ಏನಿದೆ?
ಐವರು ಯುವಕರು ಪಟ್ಟಣದ ಹೃದಯ ಭಾಗದಲ್ಲಿ ನಿಂತು ತುಂತುರು ಮಳೆಯ ನಡುವೆ ‘ಕಾಂಡೋಮ್ ಬೋಲೆ’ ಎಂದು ಹಾಡುತ್ತಾರೆ. ಯಾವುದೇ ಭಯ, ಚಿಂತೆ ಇಲ್ಲದೇ ಧೈರ್ಯದಿಂದ ಕಾಂಡೋಮ್ ಬಳಸಿ ಎಂಬ ಸಂದೇಶವನ್ನು ಹಾಡು ರವಾನಿಸಿದೆ.