ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ: ರಣ್‍ವೀರ್ ಸಿಂಗ್

Public TV
2 Min Read
collage vk rs

ಮುಂಬೈ: ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯಾವಳಿಯಲ್ಲಿ ಬಾಲಿವುಡ್ ಸ್ಟಾರ್ ರಣ್‍ವೀರ್ ಸಿಂಗ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜೊತೆ ಫೋಟೋ ತೆಗೆಸಿಕೊಂಡಿದ್ದರು.

ಸದ್ಯ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ರಣ್‍ವೀರ್ ಸಿಂಗ್ ಅವರು, ಕ್ಯಾಪ್ಟನ್ ಕೊಹ್ಲಿ, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನೀವು ನವ ಭಾರತದ ನಿಜವಾದ ಹೀರೋ ಎಂದು ಬರೆದುಕೊಂಡಿದ್ದಾರೆ.

https://www.instagram.com/p/By02n_zhF9x/?utm_source=ig_embed

ನಾನು ಬಾಲ್ಯದಿಂದಲೂ ಭಾರತೀಯ ಕ್ರಿಕೆಟ್‍ನ ಬಹು ದೊಡ್ಡ ಅಭಿಮಾನಿ. ನಾವು ನಮ್ಮ ತಂಡದ ಮೇಲೆ ತುಂಬ ಭಾವನೆಯನ್ನು ಹೂಡಿಕೆ ಮಾಡಿದ್ದೇವೆ. ನಮ್ಮ ದೇಶ ಕ್ರಿಕೆಟ್‍ನಲ್ಲಿ ಜಗತ್ತಿಗೆ ಉತ್ತಮ ದೇಶವಾಗಬೇಕು. ಇದಕ್ಕೆ ವಿರಾಟ್ ಕೊಹ್ಲಿ ಅವರು ನಮಗೆ ಆದರ್ಶವಾಗಿದ್ದಾರೆ ಎಂದಿದ್ದಾರೆ.

ಕೊಹ್ಲಿ ಅವರು ಉಗ್ರಸ್ವಭಾವ ಮತ್ತು ಬಿರುಸಿನ ಆಟವನ್ನು ಪ್ರದರ್ಶಿಸಿ, ಭಾರತ ಕ್ರಿಕೆಟ್ ತಂಡದ ಚಹರೆಯನ್ನೇ ಬದಲಾಯಿಸಿದ್ದಾರೆ. ನಮ್ಮ ದೇಶದ ಕ್ರಿಕೆಟ್ ತಂಡವನ್ನು ಒಬ್ಬ ಯೋಧನಂತೆ ಮುನ್ನಡೆಸುತ್ತಿದ್ದಾರೆ. ಅವರ ಆಟವನ್ನು ನೋಡುತ್ತಿದ್ದರೆ ಅವರು ಸಾರ್ವಕಾಲಿಕ ಶ್ರೇಷ್ಠರೆಂದು ಕರೆಸಿಕೊಳ್ಳುವ ಹಾದಿಯಲ್ಲಿದ್ದಾರೆ. ಇದು ನವಭಾರತ ಮತ್ತು ಅವರು ನವ ಭಾರತದ ಹೀರೋ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ ಕ್ಯಾಪ್ಟನ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

https://www.instagram.com/p/By0vqNFhPOX/?utm_source=ig_embed

ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿಶ್ವಕಪ್ ಪಂದ್ಯಾವಳಿ ವೇಳೆ ಪಟ್ಟಿ ವಿನ್ಯಾಸದ ಬಟ್ಟೆ, ದೊಡ್ಡ ಕನ್ನಡಕ, ವಿಭಿನ್ನವಾದ ಕ್ರಿಕೆಟ್ ವೀಕ್ಷಕ ವಿವರಣೆಯಿಂದ ಅಭಿಮಾನಿಗಳಲ್ಲಿ ಹುರುಪು ತುಂಬಲು ಯತ್ನಿಸಿದ್ದರು.

ಸುನಿಲ್ ಗವಾಸ್ಕರ್, ಹರಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಜೊತೆಗಿನ ವೀಕ್ಷಕ ವಿವರಣೆಯ ವಿಡಿಯೋ ಅವರ ಅಭಿಮಾನಿಗಳಲ್ಲಿ ಮತ್ತು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಸ್ತ್ ಮಜಾ ನೀಡಿದೆ. ಸದ್ಯ ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

https://www.instagram.com/p/By0ni4KhwGF/?utm_source=ig_embed

ಕಳೆದ ಎರಡು ವಾರದಿಂದ ಲಂಡನ್ ನಲ್ಲೇ ಇರುವ ರಣವೀರ್ ಸಿಂಗ್ 83 ಎಂಬ ಕಪಿಲ್ ದೇವ್ ಜೀವನಾಧಾರಿತ ಸಿನಿಮಾದ ಶೂಟಿಂಗ್ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಲು ಕೆಲವು ಸಂಶೋಧನೆ ಮತ್ತು ಸಾಕಷ್ಟು ಮಾಹಿತಿ ಕಲೆಹಾಕಿರುವ ನಟ, ಲಂಡನ್ ನಲ್ಲಿ ನೆಲೆಸಿರುವ ಅನೇಕ ಕ್ರಿಕೆಟ್ ಲೆಜೆಂಡ್‍ಗಳನ್ನು ಭೇಟಿ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಣ್‍ವೀರ್ ಅವರ ಪತ್ನಿ ದೀಪಿಕಾ ಪಡುಕೋಣೆ ಅವರು ಕಪಿಲ್ ದೇವ್ ಅವರ ಪತ್ನಿ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ. ಸಿನಿಮಾ 2020 ರಲ್ಲಿ ಬಿಡುಗಡೆಗೊಳ್ಳಲಿದೆ.

https://www.instagram.com/p/By0tA_IBaLc/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *