ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಮೂರು ತಿಂಗಳ ಹಿಂದೆ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಜೊತೆ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಮದುವೆ ಆಗಿ ಮೂರೇ ತಿಂಗಳಿಗೆ ಅವರು ಡ್ರಾಮಾ ಕ್ವೀನ್ ರಾಖಿ ಸಾವಂತ್‍ಗೆ ಐ ಲವ್ ಯೂ ಎಂದು ಹೇಳಿದ್ದಾರೆ.
ರಣ್‍ವೀರ್ ಸಿಂಗ್ ಅವರು ನಟಿಸಿದ ‘ಗಲ್ಲಿ ಬಾಯ್’ ಚಿತ್ರ 14ರಂದು ಬಿಡುಗಡೆ ಆಗಲು ತಯಾರಾಗಿದೆ. ಈ ನಡುವೆ ಅವರು ಟ್ರೇಡ್ ವಿಶ್ಲೇಷಕ ಕೋಮಲ್ ನಹಾಟಾ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲೇ ಅವರು ರಾಖಿ ಐ ಲವ್ ಯೂ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಿರೂಪಕನಿಗೆ ರಣ್‍ವೀರ್ ಇದುವರೆಗೂ ನೀವು ಮಾಡಿದ ಸಂದರ್ಶನದಲ್ಲಿ ಅತಿ ಕೆಟ್ಟ ಸೆಲೆಬ್ರಿಟಿ ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ಕೋಮಲ್ ಅವರು ರಾಖಿ ಸಾವಂತ್ ಹೆಸರನ್ನು ಹೇಳಿದ್ದಾರೆ. ಆಗ ರಣ್‍ವೀರ್, ರಾಖಿ ಒಬ್ಬರು ರಾಕ್‍ಸ್ಟಾರ್. ಐ ಲವ್ ಯೂ ರಾಖಿ ಎಂದು ಕಾರ್ಯಕ್ರಮದಲ್ಲಿ ತಮಾಷೆಗೆ ಹೇಳಿದ್ದಾರೆ.
ನಿರ್ದೇಶಕಿ ಜೋಯಾ ಅಖ್ತರ್ ಗಲ್ಲಿ ಬಾಯ್ ಚಿತ್ರವನ್ನು 69ನೇ ಬರ್ಲಿನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪ್ರೀಮಿಯರ್ ಶೋ ಆಯೋಜಿಸಿದ್ದಾರೆ. ಇಡೀ ಚಿತ್ರತಂಡ ಈಗ ಜರ್ಮನಿಗೆ ಹಾರಿದ್ದಾರೆ. ಚಿತ್ರದಲ್ಲಿ ರಣ್‍ವೀರ್ ಸಿಂಗ್‍ಗೆ ಜೋಡಿಯಾಗಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv