ಮುಂಬೈ: ಬಾಲಿವುಡ್ ನಟ ರಣ್ವೀರ್ ಸಿಂಗ್ ಶರ್ಟ್ ಧರಿಸದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.
Advertisement
ಬಿ-ಟೌನ್ ಹ್ಯಾಂಡ್ಸಮ್ ಹೀರೋ ರಣ್ವೀರ್ ಮುಡಿಯಿಂದ ಪಾದದವರೆಗೂ ಬೆವರುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ತಾನು ಬೆವರಲು ಕಾರಣವೇನು ಎಂದು ಅಭಿಮಾನಿಗಳಿಗೆ 4 ಆಯ್ಕೆಗಳನ್ನು ನೀಡುವ ಮೂಲಕ ಪ್ರಶ್ನಿಸಿದ್ದಾರೆ. ಇನ್ನೂ ಈ ಫೋಟೋ ನೋಡಿ ಟಾಲಿವುಡ್ ನಟಿ ಪೂಜಾ ಹೆಗ್ಡೆ ಮತ್ತು ರೆಮೋ ಡಿಸೋಜಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ರಣ್ವೀರ್ ಸ್ಟ್ರಾಂಗ್ ಲುಕ್ಗೆ ದೀಪಿಕಾ ಕಮೆಂಟ್
Advertisement
Advertisement
ಫೋಟೋದಲ್ಲಿ ರಣ್ವೀರ್ ಶರ್ಟ್ ಧರಿಸದೇ ಕೇವಲ ಸೊಂಟದ ಸುತ್ತ ಬಿಳಿ ಕಲರ್ ಟವೆಲ್ ಸುತ್ತುಕೊಂಡಿದ್ದು, ಬೆವರುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಫೋಟೋ ಜೊತೆಗೆ ಕ್ಯಾಪ್ಷನ್ನಲ್ಲಿ ರಣ್ವೀರ್ ಬೆವರುತ್ತಿರಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ. ವಿಶೇಷವೆಂದರೆ ಪ್ರಶ್ನೆ ಜೊತೆಗೆ 1. ರಣ್ವೀರ್ ಈಗಷ್ಟೇ ಸ್ಟೀಮ್ ರೂಮ್ನಿಂದ ಹೊರಬಂದಿದ್ದಾರೆ. 2. ಇಂದು ರಾತ್ರಿ ಅವರು ಟೆಲಿವಿಷನ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 3. ಅವರ ದೇಹದ ಉಷ್ಣಾಂಶ ಹೆಚ್ಚಾಗಿದೆ. 4. ಅವರು ಯೋಗಾಭ್ಯಾಸ ಮಾಡಿದ್ದಾರೆ ಎಂಬ ನಾಲ್ಕು ಆಯ್ಕೆಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡಿದ ರಣ್ವೀರ್ – ಸಿಕ್ಸ್ ಪ್ಯಾಕ್ ನೋಡಿ ಹುಡ್ಗೀರು ಕ್ಲೀನ್ ಬೋಲ್ಡ್
Advertisement
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವಾರು ಮಂದಿ ಟ್ರೋಲ್ ಮಾಡುತ್ತಿದ್ದಾರೆ. ಈ ಮಧ್ಯೆ ಪೂಜಾ ಹೆಗ್ಡೆ ಟವೆಲ್ ಬಿದ್ದು ಹೋಗುತ್ತಿದೆ ಎಂದು ಕಾಮೆಂಟ್ ಮಾಡಿದರೆ, ರೆಮೋ ಡಿಸೋಜಾ ಇದು ಓವರ್ ಆಯ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಮನೀಶ್ ಪಾಲ್ ನಾನು ಈ ಆಟವನ್ನು ಆಡುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
View this post on Instagram
ಇತ್ತೀಚೆಗಷ್ಟೇ ರಣ್ವೀರ್ ಸಿಂಗ್ ಶರ್ಟ್ ಧರಿಸದೇ ಕೇವಲ ಬ್ಲೂ ಕಲರ್ ಶಾರ್ಟ್ಸ್ ಹಾಗೂ ವೈಟ್ ಕಲರ್ ಶೂ ಧರಿಸಿ, ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡುವ ಆಡುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರಣ್ವೀರ್ ಸಿಕ್ಸ್ಪ್ಯಾಕ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅದರಲ್ಲಿಯೂ ಹುಡುಗಿಯರು ರಣ್ವೀರ್ ಹಾಟ್ ಲುಕ್ಗೆ ಕ್ಲೀನ್ ಬೋಲ್ಡ್ ಆಗಿದ್ದರು.