ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಬಾಸ್ಕೆಟ್ ಬಾಲ್ ಆಡುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಹೆಣೈಕ್ಳು ರಣ್‍ವೀರ್ ಹಾಟ್ ಲುಕ್‍ಗೆ ಫುಲ್ ಫಿದಾ ಆಗಿದ್ದಾರೆ.
Advertisement
ತಮ್ಮ ಮೊದಲ ಸಿನಿಮಾ ಬ್ಯಾಂಡ್ ಬಾಜ ಭಾರತ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ರಣ್‍ವೀರ್ ಸಿಂಗ್, ನಂತರ ಅಭಿನಯಿಸಿದ ರಾಮ್-ಲೀಲಾ ಸಿನಿಮಾ ಮೂಲಕ ಹುಡುಗಿಯರ ಹಾಟ್ ಫೇವರೇಟ್ ಹೀರೋ ಆದರು ಎಂದರೆ ತಪ್ಪಾಗಲಾರದು. ಅಲ್ಲದೇ ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್‍ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುವುದರ ಜೊತೆಗೆ ರಣ್ವೀರ್ಗೆ ಬಿ-ಟೌನ್‍ನಲ್ಲಿ ಟಾಪ್ ನಟ ಪಟ್ಟ ಗಿಟ್ಟಿಸಿಕೊಟ್ಟಿತು. ಇದನ್ನೂ ಓದಿ: ರಣ್‍ವೀರ್ ಸ್ಟ್ರಾಂಗ್ ಲುಕ್‍ಗೆ ದೀಪಿಕಾ ಕಮೆಂಟ್
Advertisement
Advertisement
ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಕದ್ದಿರುವ ರಣ್‍ವೀರ್ ನಿಜ ಜೀವನದಲ್ಲಿ ಸದಾ ತಮ್ಮ ಚೇಷ್ಟೆ ಹಾಗೂ ತರ್ಲೆ ಮೂಲಕ ಎಲ್ಲರನ್ನು ಸಖತ್ ಎಂಟರ್ಟೈನ್ ಮಾಡುತ್ತಾರೆ. ಸದ್ಯ ಬ್ಯಾಕ್ ಟೂ ಬ್ಯಾಕ್ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ರಣ್‍ವೀರ್ ಬಾಲಿವುಡ್‍ನಲ್ಲಿ ಬೇಡಿಕೆಯ ನಟರಾಗಿದ್ದಾರೆ. ಇದನ್ನೂ ಓದಿ: ರಣವೀರ್ ಸಿಂಗ್ ಸ್ಟೈಲ್- ಸಿಕ್ಕಾಪಟ್ಟೆ ವೈರಲ್
Advertisement
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ರಣ್‍ವೀರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಣ್‍ವೀರ್ ಶರ್ಟ್ ಧರಿಸದೇ ಕೇವಲ ಬ್ಲೂ ಕಲರ್ ಶಾರ್ಟ್ಸ್ ಹಾಗೂ ವೈಟ್ ಕಲರ್ ಶೂ ಧರಿಸಿ, ಬಿಸಿಲಿನಲ್ಲಿ ಬಾಸ್ಕೆಟ್ ಬಾಲ್ ಆಡುವ ಮೂಲಕ ಬೆವರಿಳಿಸಿದ್ದಾರೆ. ಇದನ್ನೂ ಓದಿ: ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್
View this post on Instagram
ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಣ್‍ವೀರ್ ಸಿಕ್ಸ್‌ಪ್ಯಾಕ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲಿಯೂ ಹುಡುಗಿಯರು ರಣ್‍ವೀರ್ ಹಾಟ್ ಲುಕ್‍ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಲ್ಲದೇ ಈ ಫೋಟೋಗೆ ಹಲವು ರೀತಿಯ ಕಾಮೆಂಟ್‍ಗಳು ಹರಿದುಬರುತ್ತಿದೆ.
ರಣವೀರ್ ಸಿಂಗ್ ನಟನೆಯ 83 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರಕ್ಕೆ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥಾ ಹಂದರ ಇರಲಿದ್ದು, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕಪಿಲ್‍ದೇವ್ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.