Connect with us

Bollywood

ದೀಪಿಕಾ ಬಾಯ್ ಫ್ರೆಂಡ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ ಕತ್ರಿನಾ ಕೈಫ್?

Published

on

Share this

ಮುಂಬೈ: ಬಾಲಿವುಡ್‍ನಲ್ಲಿ ಹೊಸ ಜೋಡಿಗಳ ಜೊತೆ ಸಿನಿಮಾ ಮಾಡುವುದು ಈಗಿನ ಟ್ರೆಂಡ್ ಆಗಿದೆ. ಈ ಬಾರಿ ರಣ್‍ವೀರ್ ಸಿಂಗ್ ಮತ್ತು ಕತ್ರಿನಾ ಕೈಫ್ ಇಬ್ಬರನ್ನು ಜೊತೆಯಾಗಿ ತೆರೆ ಮೇಲೆ ತೋರಿಸಲು ನಿರ್ದೇಶಕ ಕಬೀರ್ ಖಾನ್ ಯೋಚಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಹೊಸ ನಟಿಯ ಜೊತೆ ರಣ್‍ವೀರ್ ಸಿಂಗ್ ಸೂಚಿಸಿದ ಕತ್ರಿನಾ ಅವರ ಹೆಸರು ಕೇಳಿ ಬರುತ್ತಿದೆ. ಕತ್ರಿನಾ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರೆ ರಣ್‍ವೀರ್ ಸಿಂಗ್ ಜೊತೆ ಇವರು ನಟಿಸುತ್ತಿರುವ ಮೊದಲ ಚಿತ್ರವಾಗಲಿದೆ.

ಕಪಿಲ್ ದೇವ್ ನೇತೃತ್ವದಲ್ಲಿ 1983ಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ವಿಶ್ವಕಪ್ ಗೆದ್ದಿದ್ದನ್ನು ಕಬೀರ್ ಖಾನ್ ಚಿತ್ರದ ಮೂಲಕ ಜನರಿಗೆ ತೋರಿಸಲಿದ್ದಾರೆ. ಈ ಚಿತ್ರ ಕಪಿಲ್ ಅವರ ಆತ್ಮಚರಿತ್ರೆಯಾಗಿದ್ದು, ಕಪಿಲ್ ಪತ್ನಿಯಾದ ರೋಮಿ ಬಾಟಿಯಾ ಪಾತ್ರಕ್ಕಾಗಿ ಕತ್ರಿನಾ ಅವರನ್ನು ಸೂಚಿಸಲಾಗಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಕತ್ರಿನಾ ಕೈಫ್ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Click to comment

Leave a Reply

Your email address will not be published. Required fields are marked *

Advertisement