ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ತಮ್ಮ ಫೇಕ್ ಫೋಟೋದಲ್ಲಿನ ಮೇಕಪ್‍ನಿಂದಾಗಿ ಸಾಕಷ್ಟು ಟ್ರೋಲ್ ಆಗಿದ್ದು, ಅವರ ಮೇಲೆ ಹಲವು ಮಿಮ್ಸ್‌ಗಳನ್ನು ಮಾಡಲಾಗಿತ್ತು. ಈಗ ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರಾನು ಪುತ್ರಿ ರೊಚ್ಚಿಗೆದ್ದಿದ್ದಾರೆ.
ಕೆಲವು ದಿನಗಳ ಹಿಂದೆ ರಾನು ಅವರ ಫೋಟೋವನ್ನು ಎಡಿಟ್ ಮಾಡಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆದರೆ ಟ್ರೋಲ್‍ಗಳ ಬಗ್ಗೆ ರಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅವರ ಮಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಟ್ರೋಲ್ ಹಾಗೂ ಮಿಮ್ಸ್ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್
ರಾನು ಅವರ ಮಗಳು ಎಲಿಜಬೆಥ್, “ನನ್ನ ತಾಯಿಯನ್ನು ಈ ರೀತಿ ಟ್ರೋಲ್ ಮಾಡಿರುವುದು ನೋಡಿ ನನಗೆ ತುಂಬಾ ದುಃಖವಾಗಿದೆ. ನನ್ನ ತಾಯಿಗೆ ಮೊದಲಿನಿಂದಲೂ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಮೊದಲಿನಿಂದಲೂ ಅವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟಪಟ್ಟ ವ್ಯಕ್ತಿ ಯಶಸ್ಸು ಪಡೆದಾಗ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂಬುದು ತುಂಬಾ ದುಃಖದ ಸಂಗತಿ” ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾನು ಮೇಕಪ್ ಫೋಟೋ ವೈರಲ್- ಮೇಕಪ್ ಆರ್ಟಿಸ್ಟ್‌ನಿಂದ ನಿಜವಾದ ಫೋಟೋ ಶೇರ್
ಉತ್ತರ ಪ್ರದೇಶದ ಕಾನ್ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕೆ ರಾನು ಆಗಮಿಸಿದ್ದರು. ಈ ವೇಳೆ ಸ್ವತಃ ಮೇಕಪ್ ಆರ್ಟಿಸ್ಟ್ ಅವರಿಗೆ ಮೇಕಪ್ ಮಾಡಿದ್ದರು. ಆದರೆ ರಾನು ಅವರ ಈ ಫೋಟೋವನ್ನು ಕಿಡಿಗೇಡಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ನೋಡಿದ ನೆಟ್ಟಿಗರು ರಾನು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಅಲ್ಲದೆ ಅವರ ಮೇಲೆ ಮಿಮ್ಸ್‍ಗಳನ್ನು ಮಾಡಿದ್ದರು. ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ
ರಾನು ಅವರ ಫೇಕ್ ಮೇಕಪ್ ಫೋಟೋ ವೈರಲ್ ಆಗಿ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಇದನ್ನು ನೋಡಿದ ಮೇಕಪ್ ಆರ್ಟಿಸ್ಟ್ ಸಂಧ್ಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಅಲ್ಲದೆ ತಮ್ಮ ಇನ್‍ಸ್ಟಾದಲ್ಲಿ ತಾವು ಮಾಡಿದ ಮೇಕಪ್ ಫೋಟೋ ಹಾಗೂ ನಕಲಿ ಫೋಟೋವನ್ನು ಹಂಚಿಕೊಂಡಿದ್ದರು.



