ಮುಂಬೈ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ ಎಂದು ಈ ಹಿಂದೆ ರಾನು ಮೊಂಡಲ್ ಅವರ ಬಗ್ಗೆ ಹೇಳಿದ್ದರು. ಈಗ ಸ್ವತಃ ರಾನು ಮೊಂಡಲ್ ಅವರು ಲತಾ ಮಂಗೇಶ್ಕರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅವರ ಹಾಡನ್ನು ಲಾಂಚ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾನು ಮೊಂಡಲ್, ಹಿಮೇಶ್ ರೇಶ್ಮಿಯಾ ಹಾಗೂ `ಹ್ಯಾಪಿ ಹಾರ್ಡಿ ಅಂಡ್ ಹೀರ್’ ಚಿತ್ರತಂಡ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ರಾನು ಹಾಗೂ ಹಿಮೇಶ್ ಅವರಿಗೆ ಲತಾ ಮಂಗೇಶ್ಕರ್ ಹೇಳಿಕೆ ಬಗ್ಗೆ ಪ್ರಶ್ನಿಸಿದ್ದರು. ಇದನ್ನೂ ಓದಿ: ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ: ರಾನು ಹಾಡಿಗೆ ಲತಾ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯಿಸಿದ ಹಿಮೇಶ್ ಅವರು, ಪ್ರತಿಯೊಬ್ಬರು ಒಬ್ಬರು ಅಲ್ಲದೆ ಮತ್ತೊಬ್ಬರಿಂದ ಸ್ಫೂರ್ತಿ ಪಡೆಯುತ್ತಾರೆ. ಹಾಗೆಯೇ ರಾನು ಮೊಂಡಲ್ ಅವರು ಲತಾ ಮಂಗೇಶ್ಕರ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಈಗ ಹೇಗೆ ಗಾಯಕ ಕುಮಾರ್ ಸಾನು ಅವರು ಕಿಶೋರ್ ಕುಮಾರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳುತ್ತಾರೋ ಇದು ಕೂಡ ಹಾಗೆ. ಲತಾ ಅವರಂತೆ ಆಗಲು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಅವರು ಶ್ರೇಷ್ಠ ಗಾಯಕಿ, ಅವರ ಜೀವನದ ಪಯಣದಿಂದ ಯಾರು ಬೇಕಾದರೂ ಸ್ಫೂರ್ತಿ ಪಡೆಯಬಹುದು. ಹಾಗೆಯೇ ರಾನು ಅವರು ಸ್ಫೂರ್ತಿ ಪಡೆದಿದ್ದಾರೆ. ಆದರೆ ಒಂದು ಮಾತು ಸತ್ಯ ರಾನು ಹುಟ್ಟು ಗಾಯಕಿ. ಅವರಲ್ಲಿ ಪ್ರತಿಭೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾನು ಧನ್ಯವಾದ ತಿಳಿಸಿದ್ದಕ್ಕೆ ಭಾವುಕರಾದ ಗಾಯಕ ಹಿಮೇಶ್
ಅರಿಜಿತ್ ಸಿಂಗ್ ಅವರ ಹಾಡನ್ನು ಯಾರಾದರೂ ಹಾಡಿದರೆ ಮತ್ತು ಅವರಂತೆ ಹಾಡಿದರೆ ಅದು ಕಾಪಿ ಮಾಡಿದ್ದಾರೆ ಎಂದು ಅಲ್ಲ. ಅವರು ಆ ಗಾಯಕರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದರ್ಥ. ಲತಾ ಅವರ ಮಾತಿನ ಅರ್ಥ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಹಿಮೇಶ್ ಅವರು ಹೇಳಿದ್ದಾರೆ. ಬಳಿಕ ಈ ಬಗ್ಗೆ ಮಾತನಾಡಿದ ರಾನು ಅವರು, ನಾನು ಬಾಲ್ಯದಿಂದಲೂ ಲತಾ ಅವರ ಹಾಡು ಹಾಡುತ್ತಾ ಬಂದಿದ್ದೇನೆ. ಲತಾ ಅವರ ಈ ಹಾಡು ನನಗೆ ತುಂಬಾ ಇಷ್ಟ. ಅಲ್ಲದೆ ಎಲ್ಲರೂ ನನ್ನ ಧ್ವನಿ ಲತಾ ಮಂಗೇಶ್ಕರ್ ರೀತಿ ಇದೇ ಎಂದು ಹೇಳುತ್ತಾರೆ. ಜನರ ಮಾತನ್ನು ಕೇಳಿ ನಾನು ಅದೃಷ್ಟವಂತೆ ಎಂದು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು
ಲತಾ ಹೇಳಿದ್ದೇನು?
ಈ ಹಿಂದೆ ಲತಾ ಅವರು, ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದ್ದು ಆಗಿದ್ದರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾನು, ಕಿಶೋರ್, ರಫಿ, ಮುಕೇಶ್ ಅಥವಾ ಆಶಾ ಅವರು ಹಾಡಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ. ಹಳೆ ಗಾಯಕರ ಹಾಡುಗಳನ್ನು ಹಾಡುವುದು ಸರಿ. ಆದರೆ ಒಂದು ದಿನ ಅವರು ತಾವು ಹಾಡಿದ ಹಾಡಿನ ಮೂಲಕ ಜನರಿಗೆ ಪರಿಚಯವಾಗಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್