ಕೊಲ್ಕತ್ತಾ: ಜಾರ್ಖಂಡ್ ಮತ್ತು ನಾಗಾಲ್ಯಾಂಡ್ ನಡುವಿನ ರಣಜಿ ಟ್ರೋಫಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡ ಅತಿ ಹೆಚ್ಚು ರನ್ ಗಳಿಸುವ ಮೂಲಕ ನೂತನ ದಾಖಲೆಯನ್ನು ಸೃಷ್ಟಿಸಿದೆ.
ಈಡನ್ ಗಾರ್ಡ್‍ನ್‍ನಲ್ಲಿ ನಡೆದ ಪಂದ್ಯದ ವೇಳೆ ನಾಗಾಲ್ಯಾಂಡ್ ನಾಯಕ ರೊಂಗ್‍ಸೆನ್ ಜೊನಾಥನ್ ಟಾಸ್ ಗೆದ್ದು, ಎದುರಾಳಿ ತಂಡ ಜಾರ್ಖಂಡ್‍ಗೆ ಬ್ಯಾಟಿಂಗ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್‍ಗೆ 402ರನ್ ಗಳಿಸಿತ್ತು. ಕುಮಾರ್ ಕುಶಾಗ್ರಾ ದ್ವಿಶತಕ ಹಾಗೂ ವಿರಾಟ್ ಸಿಂಗ್ 107 ರನ್ ದಾಖಲಿಸಿದ್ದರು.
Advertisement
Advertisement
ಎರಡನೇ ದಿನದಾಟದಲ್ಲಿ ಕುಶಾಗ್ರಾ ಹಾಗೂ ಅನುಜುಲ್ ರಾಯ್ ಜೊತೆಯಾಡಿ 166 ರನ್ ಕಲೆ ಹಾಕಿದ್ದರು. ಅನುಕುಲ್ ರಾಯ್ ಅರ್ಧಶತಕಗಳಿಸಿದ್ದಾರೆ. 9 ವಿಕೆಟ್ ನಷ್ಟಕ್ಕೆ 769ರನ್ ಗಳಿಸಿತ್ತು. ಮೂರನೇ ದಿನವೂ ಜಾರ್ಖಂಡ್‍ನ ಆಟ ಮುಂದುವರೆದಿದ್ದು, ರಾಹುಲ್ ಶುಕ್ಲಾ ಅರ್ಧಶತಕ ಗಳಿಸಿ ಜಾರ್ಖಂಡ್‍ಗೆ 880 ರನ್ ಗಳಿಸಲು ಸಹಾಯ ಮಾಡಿದರು. ಇದನ್ನೂ ಓದಿ: ಉಕ್ರೇನ್ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ: ರಷ್ಯಾ ಪೈಲಟ್ ಸಂದೇಶದ ವೀಡಿಯೋ ವೈರಲ್
Advertisement
ಜಾರ್ಖಂಡ್ 880 ರನ್ ಗಳಿಸಿದ ಹಿನ್ನೆಲೆಯಲ್ಲಿ ರಣಜಿ ಟ್ರೋಫಿ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ದಾಖಲಿಸಿದ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಜಾರ್ಖಂಡ್, ಮುಂಬೈನ ದಾಖಲೆಯನ್ನು ಮುರಿದಿದೆ. 1990-91ರಲ್ಲಿ ಮುಂಬೈ ತಂಡ ಹೈದರಾಬಾದ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 855 ರನ್ ಗಳಿಸಿತ್ತು.
Advertisement
ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಮೊದಲ ನಾಲ್ಕು ತಂಡಗಳು:
944/6 – ಹೈದರಾಬಾದ್ vs ಆಂಧ್ರಪ್ರದೇಶ್
912/6- ತಮಿಳುನಾಡು vs ಗೋವಾ
880/10- ಜಾರ್ಖಂಡ್ vs ನಾಗಾಲ್ಯಾಂಡ್
ಇನ್ನುಳಿದಂತೆ 2020ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಅಂಡರ್-19 ಭಾಗವಾಗಿದ್ದ ಕುಶಾಗ್ರಾ 213 ಎಸೆತಗಳಲ್ಲಿ ದ್ವಿಶತಕ ಗಳಿಸಿ ದಾಖಲೆಯನ್ನು ಸೃಷ್ಟಿಸಿದರು. ರಣಜಿ ಟ್ರೋಫಿ ಹಾಗೂ ಪ್ರಥಮ ದರ್ಜೆಯ ಕ್ರಿಕೆಟ್‍ನಲ್ಲಿ 250ರನ್ ಗಳಿಸಿದ ಕುಶಗ್ರಾ ಅತ್ಯಂತ ಕಿರಿಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್