ಇಂದೋರ್: ರಣಜಿ ಟ್ರೋಫಿ (Ranji Trophy 2023) ಪಂದ್ಯದಲ್ಲಿ ಆಂಧ್ರಪ್ರದೇಶ (Ranji Trophy 2023) ತಂಡದ ಕ್ಯಾಪ್ಟನ್ ಹನುಮ ವಿಹಾರಿ (Hanuma Vihari) ತನ್ನ ಬಲಗೈ ಮೂಳೆ ಮುರಿದರೂ (Fractured Hand) ಎರಡೂ ಇನ್ನಿಂಗ್ಸ್‌ಗಳಲ್ಲೂ ಎಡಗೈನಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕಾಗಿ ಹೋರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
ಆಂಧ್ರಪ್ರದೇಶ (Andhra Pradesh) ಹಾಗೂ ಮಧ್ಯಪ್ರದೇಶ (Andhra Pradesh) ನಡುವಿನ ಕ್ವಾರ್ಟರ್ ಫೈನಲ್ (Quarter-Final) ಪಂದ್ಯದ ಪ್ರಥಮ ಇನ್ನಿಂಗ್ಸ್ ವೇಳೆ ಮೂಳೆ ಮುರಿತಕ್ಕೆ ಒಳಗಾಗಿ ಕೈಗೆ ಪ್ಲಾಸ್ಟರ್ ಹಾಕಿದ್ದರೂ ವಿಹಾರಿ ಆಂಧ್ರಪ್ರದೇಶದ ಬ್ಯಾಟಿಂಗ್ ಸರದಿ ಬಂದಾಗ ಬಲಗೈ ಬ್ಯಾಟರ್ ಎಡಗೈ ಒಂದರಲ್ಲೇ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಪ್ರಥಮ ಇನ್ನಿಂಗ್ಸ್‌ನಲ್ಲಿ 22 ರನ್ (57 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆಗಿದ್ದ ವಿವಾರಿ, ಎರಡನೇ ಇನ್ನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡ ಆಂಧ್ರಪ್ರದೇಶದ ಸ್ಥಿತಿ ಕಂಡು ಮತ್ತೆ ಒಂದೇ ಕೈನಲ್ಲಿ ಬ್ಯಾಟಿಂಗ್ ನಡೆಸಲು ಮುಂದಾದರು. ಇದನ್ನೂ ಓದಿ: T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ
Advertisement
Do it for the team. Do it for the bunch.
Never give up!!
Thank you everyone for your wishes. Means a lot!! pic.twitter.com/sFPbHxKpnZ
— Hanuma vihari (@Hanumavihari) February 1, 2023
Advertisement
ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಒಂದರಲ್ಲಿ ಮೂರು ಬೌಂಡರಿ ಸಹಿತ 16 ಎಸೆತಗಳಲ್ಲಿ 15 ರನ್ ಸಿಡಿಸಿ ತಂಡದ ಮೊತ್ತ 90ರ ಗಡಿದಾಟುವಂತೆ ನೋಡಿಕೊಂಡರು. ಇತ್ತ ತಂಡಕ್ಕಾಗಿ ನೆರವಾಗಲು ವಿಹಾರಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದನ್ನು ಕಂಡು ಕ್ರಿಕೆಟ್ ಪಂಡಿತರು ಸಹಿತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k