ಕಾರವಾರ: ಅರಬ್ಬಿ ಸಮುದ್ರದಲ್ಲಿ ಅತೀ ಅಪರೂಪ ಎನ್ನುವ ಸ್ಪ್ಯಾನರ್ ಕ್ರಾಬ್ ಉತ್ತರ ಕನ್ನಡ ಜಿಲ್ಲೆಯ ನೇತ್ರಾಣಿ ನಡುಗಡ್ಡೆ ಭಾಗದಲ್ಲಿ ಉಡುಪಿಯ ಮಲ್ಪೆ ಮೀನುಗಾರರ ಬಲೆಗೆ ಬಿದ್ದಿದೆ.
ಕಡಲ ವಿಜ್ಞಾನಿಗಳ ಪ್ರಕಾರ, ಕರ್ನಾಟಕ ಕರಾವಳಿಯಲ್ಲಿ ಬಲು ಅಪರೂಪವೆನ್ನುವ ಈ ಏಡಿ ಹಲವು ವರ್ಷಗಳ ಹಿಂದೆ ಪತ್ತೆಯಾಗಿತ್ತು. ನಂತರ ಇದೇ ಮೊದಲ ಬಾರಿಗೆ ಈ ಏಡಿ ಅರಬ್ಬಿ ಸಮುದ್ರದ ನೇತ್ರಾಣಿ ನಡುಗಡ್ಡೆ ಭಾಗದಲ್ಲಿ ಪತ್ತೆಯಾಗಿದೆ.
Advertisement
Advertisement
ಇದಕ್ಕೆ Ranina ranina ಎಂದು ವೈಜ್ಞಾನಿಕ ಹೆಸರಿದೆ. ಕರ್ನಾಟಕದ ಕಡಲತೀರಕ್ಕೆ ಇದು ಅಪರೂಪದ ಏಡಿಯಾಗಿದ್ದು, ಕಪ್ಪೆ ಆಕೃತಿ ಹೊಂದುತ್ತದೆ. ಆಫ್ರಿಕಾ, ಹವಾಯಿ ದ್ವೀಪ ಹಾಗೆಯೇ ಗ್ರೇಟ್ ಬ್ಯಾರಿಯರ್ ರೀಫ್‍ಗಳಲ್ಲಿ, ಆಸ್ಟ್ರೇಲಿಯಾ, ಲಕ್ಷ ದ್ವೀಪದಲ್ಲಿ ಹೆಚ್ಚಾಗಿ ಈ ಸ್ಪ್ಯಾನರ್ ಕ್ರಾಬ್ ಸಿಗುತ್ತದೆ.
Advertisement
ಸಮುದ್ರದ ಮರಳು ಇರುವ ತಳದಲ್ಲಿ 100 ಮೀಟರ್ ಆಳದವರೆಗೆ ಈ ಏಡಿಗಳು ಜೀವಿಸುತ್ತದೆ. 7ರಿಂದ 9 ವರ್ಷಗಳ ವರೆಗೆ ಜೀವಿಸುವ ಏಡಿ. 400- 900 ಗ್ರಾಂ ಹಾಗೂ ಕೆಲವೊಮ್ಮೆ ಒಂದು ಕೆಜಿ ತೂಕ ಹೊಂದಿರುತ್ತದೆ. ಶೆಟ್ಲಿ, ಕಪ್ಪೆಚಿಪ್ಪು ಮುಂತಾದ ಮೀನುಗಳನ್ನು ತಿನ್ನುವ ಈ ಏಡಿಗೆ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಒಂದು ಏಡಿಯ ಬೆಲೆ ಸುಮಾರು 1 ಸಾವಿರ ರೂಪಾಯಿಂದ 1.5 ಸಾವಿರ ರೂಪಾಯಿವರೆಗೂ ಇದೆ.
Advertisement
ಇವು ಸಹಜವಾಗಿ ಸಿಗಡಿ ಟ್ರಾಲಿಂಗ ಮೀನುಗಾರಿಕೆಯ ಸಮಯದಲ್ಲಿ ರಾತ್ರಿ ವೇಳೆಯಲ್ಲಿ ಕಂಡುಬರುತ್ತವೆ. 2006ರಲ್ಲಿ ಪಂಬನ್ ಕಡಲತೀರದಲ್ಲಿ ಸ್ಪ್ಯಾನರ್ ಏಡಿ ದೊರಕಿದ ಮಾಹಿತಿ ಉಲ್ಲೇಖವಿದ್ದು, ಈಗ ಕರ್ನಾಟಕ ಕರಾವಳಿಯಲ್ಲಿ ಪತ್ತೆಯಾಗಿರುವುದು ವಿಷೇಶವಾಗಿದೆ.