ಕೊಲಂಬೋ: ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೈವರ್ದನಾ ಅವರು ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಯನ್ನು ಘೋಷಿಸಿದರು ಹಾಗೂ ಹೊಸ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ 7 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಇದನ್ನೂ ಓದಿ: ಬಡವರ ಉದ್ಧಾರಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯೋತ್ಸವ: ಹಾಲಪ್ಪ ಕಿಡಿ
Advertisement
Advertisement
ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಭಾರೀ ಪ್ರತಿಭಟನೆ ನಡೆದ ಹಿನ್ನೆಲೆ ಗೊಟಬಯ ರಾಜಪಕ್ಸೆ ಗುರುವಾರ ಕೊನೆಗೂ ರಾಜೀನಾಮೆ ನೀಡಿದರು. ತಮ್ಮ ವಿರುದ್ಧದ ಪ್ರತಿಭಟನೆಯಿಂದ ತಪ್ಪಿಸಿಕೊಳ್ಳಲು ರಾಜಪಕ್ಸೆ ಲಂಕಾ ತೊರೆದು ಪಲಾಯನಗೈದಿದ್ದರು. ಈ ಹಿನ್ನೆಲೆ ತಮ್ಮ ರಾಜೀನಾಮೆ ಪತ್ರವನ್ನು ಸಂಸತ್ತಿನ ಸ್ಪೀಕರ್‌ಗೆ ಇ-ಮೇಲ್ ಮೂಲಕ ಕಳುಹಿಸಿದ್ದರು. ಇದನ್ನೂ ಓದಿ: ಶೀಘ್ರವೇ ಗುಣಮುಖರಾಗಿ – ಸ್ಟಾಲಿನ್‌ಗೆ ಶುಭಹಾರೈಸಿದ ಬೊಮ್ಮಾಯಿ
Advertisement
Advertisement
ಗೊಟಬಯ ರಾಜಪಕ್ಸೆ ಗುರುವಾರ ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾದ ಸರ್ಕಾರಿ ಕಟ್ಟಡಗಳಿಂದ ಪ್ರತಿಭಟನಾಕಾರರು ಹಿಮ್ಮೆಟ್ಟಿದ್ದಾರೆ. ಲಂಕಾ ರಾಜಧಾನಿಯಾದ್ಯಂತ ಪರಿಸ್ಥಿತಿ ಶಾಂತರೀತಿಗೆ ಮರಳುತ್ತಿದೆ.