
ಬೆಳಗಾವಿ: ರಾಜಕೀಯ ಲಾಭಕ್ಕಾಗಿ ಸಿದ್ದರಾಮೋತ್ಸವ ಮಾಡುತ್ತಿದ್ದು, ಜನರ ಉದ್ಧಾರಕ್ಕೆ ಅಲ್ಲ ಎಂದು ಧಾರವಾಡ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 60 ವರ್ಷಗಳಿಂದ ಅಧಿಕಾರಿ ಅನುಭವಿಸಿ ಇದೀಗ ಅಧಿಕಾರ ಕಳೆದುಕೊಂಡಿದ್ದಾರೆ. ಮರಳಿ ಅಧಿಕಾರ ಪಡೆಯಲು ಪ್ರಯತ್ನ ಮಾಡ್ತಿದ್ದಾರೆ. ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಇವೆಲ್ಲವೂ ಪಾದಯಾತ್ರೆ, ಸಿದ್ದರಾಮೋತ್ಸವ ಮಾಡಿ ಜನರನ್ನು ಆಕರ್ಷಣೆ ಮಾಡ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು
ಇದು ಜನರ ಉದ್ಧಾರಕ್ಕೆ ಅಲ್ಲ. ಅವರ ರಾಜಕೀಯ ಲಾಭಕ್ಕಾಗಿ ಉತ್ಸವ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ಒಳ್ಳೆಯದು ಮಾಡುವುದಕ್ಕೆ ಎಂದು ನನಗೆ ಅನಿಸಿಲ್ಲ. ಜನರ ಮಧ್ಯೆ ಇದ್ದೇವೆ ಎಂದು ತೋರಿಸಲು ಇಂತಹ ಕಾರ್ಯಕ್ರಮ ಮಾಡ್ತಿದ್ದಾರೆ ಎಂದರು.
ಸಚಿವ ಸಂಪುಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಇದಕ್ಕೆ ರಾಷ್ಟ್ರೀಯ, ನಾಯಕರು, ರಾಜ್ಯದ ಹಿರಿಯರು ಎಲ್ಲರೂ ಕೂಡಿಕೊಂಡು ಒಟ್ಟಿಗೆ ನಿರ್ಣಯ ತೆಗೆದುಕೊಳ್ಳುತ್ತಾರೆ. ಹೀಗಾಗಿ ಸೂಕ್ತ ಸಮಯದಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ ಸೆರೆ ಸಿಕ್ಕ ಗುರು-ಚಂದ್ರನ ಬೆರಗುಗೊಳಿಸುವ ಫೋಟೋ