`ರಂಗೀಲಾ’ ಬೆಡಗಿ, ಮಾದಕ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಸಂಸಾರ ಜೀವನ ಹಳಿ ತಪ್ಪಿದೆ. 2016ರಲ್ಲಿ ನಟಿ ಊರ್ಮಿಳಾ ಉದ್ಯಮಿ ಮೋಹ್ಸಿನ್ ಅಖ್ತರ್ (Mohsin Akhtar) ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಒಮ್ಮತದ ನಿರ್ಧಾರದ ಮೂಲಕ ದೂರಾಗೋಕೆ ಇಷ್ಟ ಪಡುತ್ತಿದ್ದು, ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಹೌದು ಎನ್ನುವಂತೆ ಪತಿಯನ್ನು ಊರ್ಮಿಳಾ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ದಿನವೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದ ದಂಪತಿ ಈಗ ಏಕಾಏಕಿ ವಿಚ್ಛೇದನ ಪಡೆಯಲು ನಿರ್ಧರಿಸಿರುವುದು ಆಶ್ಚರ್ಯಕರ ಸಂಗತಿ. ಸಿನಿಮಾದಿಂದಲೂ ಅಂತರ ಕಾಯ್ದುಕೊಂಡಿದ್ದ ಊರ್ಮಿಳಾ ಪತಿ ಜೊತೆ ಉತ್ತಮ ಸಂಸಾರ ನಡೆಸುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೀಗ ದಿಢೀರ್ ಇಬ್ಬರ ಸೆಪರೇಶನ್ ಸುದ್ದಿ ಬಂದಿದೆ. ಅಲ್ಲಿಗೆ 8 ವರ್ಷದ ಮದುವೆ ಸಂಬಂಧವನ್ನ ಊರ್ಮಿಳಾ ಮುರಿದುಕೊಳ್ಳಲು ನಿರ್ಧರಿಸಿದ್ದಾರಂತೆ.ಇದನ್ನೂ ಓದಿ: ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!
ರಂಗೀಲಾ (Rangeela) ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದ ಊರ್ಮಿಳಾ, 90ರ ದಶಕದ ಪಡ್ಡೆ ಹುಡುಗರ ನಿದ್ದೆ ಕದ್ದ ಪೋರಿ ಎಂದೇ ಖ್ಯಾತರಾಗಿದ್ದ ಗ್ಲ್ಯಾಮರ್ ನಟಿ. ಹಲವು ವರ್ಷಗಳು ಸಿಂಗಲ್ ಆಗೇ ಇದ್ದ ಊರ್ಮಿಳಾ ಅನ್ಯಕೋಮಿನ ಪುರುಷನ ಜೊತೆ ತಡವಾಗೇ ಸಂಸಾರ ಜೀವನಕ್ಕೆ ಕಾಲಿಟ್ಟಿದ್ದರು. 8 ವರ್ಷದ ದಾಂಪತ್ಯ ಜೀವನವನ್ನ ಇದೀಗ ಅಂತ್ಯಗೊಳಿಸಲು ಪರಸ್ಪರ ಮಾತನಾಡಿಕೊಂಡು ದೂರಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.