ಬೆಂಗಳೂರು: ನಿರ್ದೇಶಕ ದಯಾಳ್ ಪದ್ಮನಾಭನ್ ಯಾವ ಚಿತ್ರವನ್ನೇ ಮಾಡಿದರೂ ವಿಶಿಷ್ಟವಾದ ಕಥೆಯನ್ನೇ ಕೈಗೆತ್ತಿಕೊಂಡಿರುತ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಇತ್ತೀಚೆಗೆ ತೆರೆಗಂಡಿದ್ದ ತ್ರಯಂಬಕಂ ಚಿತ್ರದವರೆಗೂ ಅವರು ಆ ನಂಬಿಕೆಯನ್ನು ಹುಸಿಗೊಳಿಸಿದ್ದೇ ಇಲ್ಲ. ಇದೀಗ ಅವರು ರಂಗನಾಯಕಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದರ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಮೂಲಕವೇ ಇದು ದಯಾಳ್ ನಿರ್ದೇಶನದ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನವಾದ ಕಥೆಯನ್ನೊಳಗೊಂಡಿರೋ ಸಿನಿಮಾ ಎಂಬ ಭರವಸೆ ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ.
Advertisement
ಈ ಟ್ರೇಲರ್ ಬಿಡುಗಡೆಯಾದ ತುಸು ಹೊತ್ತಿನಲ್ಲಿಯೇ ವ್ಯಾಪಕ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಭರ್ಜರಿಯಾದ ಪಾಸಿಟಿವ್ ಕಮೆಂಟುಗಳನ್ನೂ ತನ್ನದಾಗಿಸಿಕೊಳ್ಳುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನತ್ತ ಸಾಗುತ್ತಿದೆ. ವ್ಯಾಲ್ಯೂಮ್ 1 ವರ್ಜಿನಿಟಿ ಎಂಬ ಟ್ಯಾಗ್ ಲೈನ್ ಹೊಂದಿರೋ ರಂಗನಾಯಕಿಯ ಕಥೆ ಅತ್ಯಾರಕ್ಕೊಳಗಾದ ಹುಡುಗಿಯೊಬ್ಬಳು ಸಮಾಜವನ್ನು ಎದುರಿಸುವಂಥಾ ಸೂಕ್ಷ್ಮ ಕಥಾಹಂದರವನ್ನೊಳಗೊಂಡಿರೋ ಸ್ಪಷ್ಟ ಸುಳಿವನ್ನು ಈ ಟ್ರೇಲರ್ ಬಿಟ್ಟು ಕೊಟ್ಟಿದೆ. ಇದು ವಿಶೇಷವಾದ ಕಥೆಯ ಮಹಿಳಾಪ್ರಧಾನ ಚಿತ್ರ. ಇಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ರಂಗನಾಯಕಿಯಾಗಿ ಅಮೋಘವಾಗಿ ಅಭಿನಯಿಸಿರೋ ಸ್ಪಷ್ಟ ಲಕ್ಷಣಗಳೂ ಗೋಚರಿಸಿವೆ.
Advertisement
Advertisement
ದಯಾಳ್ ಪದ್ಮನಾಭನ್ ಅವರಿಗೆ ಈ ಚಿತ್ರದಲ್ಲಿಯೂ ನಟ ನವೀನ್ ಕೃಷ್ಣ ಸಂಭಾಷಣೆಕಾರರಾಗಿ ಸಾಥ್ ಕೊಟ್ಟಿದ್ದಾರೆ. ಅದಿತಿ ಪ್ರಭುದೇವ ಜೊತೆ ಎಂಜಿ ಶ್ರೀನಿವಾಸ್ ಮತ್ತು ತ್ರಿವಿಕ್ರಂ ಮುಖ್ಯ ಪಾತ್ರಗಳ ಮೂಲಕ ಜೊತೆಯಾಗಿದ್ದಾರೆ. ಈ ಹಿಂದೆ ಎಟಿಎಂ ಎಂಬ ಚಿತ್ರ ನಿರ್ಮಾಣ ಮಾಡಿದ್ದ ಎಸ್ ವಿ ನಾರಾಯಣ್ ರಂಗನಾಯಕಿಗೂ ಬಂಡವಾಳ ಹೂಡಿದ್ದಾರೆ. ಹೆಣ್ಣೊಬ್ಬಳು ಅತ್ಯಾಚಾರಕ್ಕೊಳಗಾದರೆ ಕೇಸು ದಾಖಲಿಸಿ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲೂ ಪೋಶಕರು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಈ ಸಮಾಜದ ಭಯ. ಆದರಿಲ್ಲಿ ಅತ್ಯಾಚಾರಕ್ಕೀಡಾದ ನಾಯಕಿಯೇ ಖುದ್ದಾಗಿ ಕೇಸು ದಾಖಲಿಸೋ ದೃಷ್ಯದ ಮೂಲಕ ಇದೊಂದು ಭಿನ್ನ ಕಥೆ ಹೊಂದಿರೋ ಚಿತ್ರವೆಂಬ ಸುಳಿವನ್ನೂ ಈ ಟ್ರೇಲರ್ ಬಿಟ್ಟುಕೊಟ್ಟಿದೆ. ಇದುವೇ ರಂಗನಾಯಕಿಗಾಗಿ ಪ್ರೇಕ್ಷಕರು ನಕಾತರದಿಂದ ಕಾಯುವಂತೆಯೂ ಮಾಡಿದೆ.