ಹಾವೇರಿ: 40 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ರಾಣೇಬೆನ್ನೂರು (Ranebennur) ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಪಿಎಸ್‌ಐ ವಾಹನ ಚಾಲಕ ಇಬ್ಬರೂ ಲೋಕಾಯುಕ್ತ (Karnataka Lokayukta) ಬಲೆ ಬಿದ್ದಿದ್ದಾರೆ.
ರಾಣೆಬೆನ್ನೂರು ಶಹರ ಠಾಣೆಯ (Ranebennur Police Station) ಪಿಎಸ್‌ಐ ಸುನೀಲ ತೇಲಿ, ವಾಹನ ಚಾಲಕ ಸಚಿನ್ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ
ರಾಣೇಬೆನ್ನೂರು ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು 50 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಫೀರೋಜಾ ಎಂಬ ವ್ಯಕ್ತಿ 40 ಸಾವಿರ ರೂ. ಹಣವನ್ನ ಟೀ ಸ್ಟಾಲ್‌ನಲ್ಲಿ ಕೊಟ್ಟು ಹೋಗಿದ್ದರು. ಈ ಹಣವನ್ನ ಚಾಲಕ ತೆಗೆದುಕೊಂಡು ಪಿಎಸ್‌ಐಗೆ ಕೊಡುತ್ತಿದ್ದ ವೇಳೆ ರೇಡ್ ಹ್ಯಾಂಡ್‌ಆಗಿ ಸಿಕ್ಕಿ ಬಿದ್ದಿದ್ದಾರೆ.
ಹಾವೇರಿ ಲೋಕಾಯುಕ್ತ ಅಧಿಕಾರಿಗಳ ನೇತ್ರತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು : ಮೋದಿ ಬಳಿ ಅಫ್ರಿದಿ ಮನವಿ