ಮೈಸೂರು: ನಾನು ಅನಾರೋಗ್ಯದಿಂದ ಬಳುತ್ತಿದ್ದೇನೆ. ಹೀಗಾಗಿ ನನಗೆ ಬರಲು ಆಗುತ್ತಿಲ್ಲ ಎಂದು ಇಂಟರ್ ನೆಟ್ ಸ್ಟಾರ್ ಗಾಯಕಿ ರಾನು ಮೊಂಡಲ್ ಅವರು ವಿಡಿಯೋ ಮಾಡುವ ಮೂಲಕ ಜನರಲ್ಲಿ ಕ್ಷಮೆ ಕೇಳಿದ್ದಾರೆ.
ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ಮೈಸೂರಿನಲ್ಲಿ ಯುವ ದಸರಾ ಉದ್ಘಾಟನೆ ಆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಲಿವುಡ್ ಹಿನ್ನೆಲೆ ಗಾಯಕಿ ರಾನು ಮೊಂಡಲ್ ಅವರು ಆಗಮಿಸಬೇಕಿತ್ತು. ಆದರೆ ರಾನು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
Advertisement
Advertisement
ವಿಡಿಯೋದಲ್ಲಿ ರಾನು ಅವರು, “ನಮಸ್ತೆ. ಮೈಸೂರು ದಸರಾಗೆ ನೀವು ನನಗೆ ಆಹ್ವಾನ ನೀಡಿದ್ದೀರಿ. ಆದರೆ ಇಂದು ನನಗೆ ಬರಲು ಆಗಲಿಲ್ಲ. ಏಕೆಂದರೆ ನನಗೆ ಅನಾರೋಗ್ಯವಿದೆ. ಹೀಗಾಗಿ ನಾನು ಬರಲು ಆಗುತ್ತಿಲ್ಲ. ನಾನು ಬರದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ನನ್ನ ಕರೆದರೆ ನಾನು ಬರುತ್ತೇನೆ” ಎಂದು ಹಿಂದಿಯಲ್ಲಿ ಹೇಳಿದ್ದಾರೆ.
Advertisement
Advertisement
ಇಂದಿನಿಂದ ಅಕ್ಟೋಬರ್ 6ರವರೆಗೆ ಯುವ ದಸರಾ ನಡೆಯಲಿದೆ. ಇಂದು ಕಾರ್ಯಕ್ರಮಕ್ಕೆ ಹಾಜರಾಗಿ ರಾನು ಮೊಂಡಲ್ ಎಲ್ಲರಿಗೂ ಮನರಂಜನೆ ನೀಡಬೇಕಿತ್ತು. ಅಲ್ಲದೆ ಇಂದು ಕಾರ್ಯಕ್ರಮ ಉದ್ಘಾಟನೆ ಆದ ಬಳಿಕ ರಾನು ಮೊಂಡಲ್‍ಗೆ ಯುವ ದಸರಾ ಉಪಸಮಿತಿ ಸನ್ಮಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿತ್ತು.
ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡಿ, ಹಾಡು ಹಾಡಿ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬಳಿಕ ರಾನು ಅವರಿಗೆ ಹಿಮೇಶ್ ರೇಶ್ಮಿಯಾ ಅವರು ತೇರಿ ಮೇರಿ ಕಹಾನಿ ಎಂಬ ಹಾಡನ್ನು ಹಾಡಲು ಅವಕಾಶ ನೀಡಿದರು. ಈ ಮೂಲಕ ರಾನು ಸ್ಟಾರ್ ಆದರು. ಸದ್ಯ ರಾನು ಅವರಿಗೆ ಬಾಲಿವುಡ್ ಹಾಗೂ ಇತರೆ ಸಿನಿಮಾದಲ್ಲಿ ಹಾಡಲು ಅವಕಾಶಗಳು ದೊರೆಯುತ್ತಿದ್ದು, ಸಖತ್ ಮಿಂಚುತ್ತಿದ್ದಾರೆ.