ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‍ದೀಪ್ ಸುರ್ಜೇವಾಲಾ ಕರಗದ ಬಗ್ಗೆ ಶುಭ ಕೋರಿದ್ದಾರೆ.
ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ದರ್ಗಾಕ್ಕೆ ಹೋಗುವುದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುರ್ಜೇವಾಲಾ ಕರಗದ ಶುಭ ಕೋರಿ ರಾಜ್ಯ ಬಿಜೆಪಿಯ ಕಾಲೆಳೆದಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಎಲ್ಲರಿಗೂ ಲೋಕ ಕಲ್ಯಾಣಾರ್ಥದ ಕರಗ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಧರ್ಮರಾಯ ಸ್ವಾಮಿ ದೇವಸ್ಥಾನದ ಸಾಮರಸ್ಯದ ಉತ್ಸಾಹವು ಕರ್ನಾಟಕ ಮತ್ತು ಭಾರತದ ಶ್ರೀಮಂತ ವೈಭವ ಮತ್ತು ಸಂಪ್ರದಾಯಗಳನ್ನು ಸಂಕೇತಿಸುತ್ತದೆ.ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷ, ಮತ್ತು ಹಿಂಸೆಯಿಂದ ಕೂಡಿದ ಬಿಜೆಪಿ ನಾಯಕರ “ಆತ್ಮ” ವನ್ನು ಶುದ್ಧೀಕರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.