– ಮೋದಿ ಕೇವಲ ಭ್ರಮೆಯಲ್ಲಿದ್ದಾರೆ
ರಾಯಚೂರು: ಬಿಎಸ್‍ವೈಗೆ ಮೋದಿ ಅವಮಾನಿಸಿ ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ರಾಯಚೂರಿನಲ್ಲಿ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲ ದೂರ ಮಾಡಲು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ ವಿಭಾಗೀಯ ಮಟ್ಟದ ಮುಖಂಡರ ಸಭೆ ಮಾಡಲಾಗಿದೆ. ಬಿಜೆಪಿ ಕಲ್ಯಾಣ ಕರ್ನಾಟಕದ ವಿರೋಧಿ ಪಕ್ಷವಾಗಿದೆ. ಬಿಜೆಪಿ ಸದಾಕಾಲವೂ ಕಲ್ಯಾಣ ಕರ್ನಾಟಕವನ್ನ ಕಡೆಗಣನೆ ಮಾಡುತ್ತ ಬಂದಿದೆ. 1500 ಕೋಟಿಯಲ್ಲಿ 630 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೊರೊನಾದಿಂದ ಮೃತರ ಪ್ರಮಾಣ ಪತ್ರ ಸಹ ಸಿಗುತ್ತಿಲ್ಲ ಎಂದು ಬಿಜೆಪಿ ಸರ್ಕಾರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಜನತೆಗೆ ಬೂದಿ ಆಶೀರ್ವಾದ ಮಾಡಿದೆ: ಡಿ.ಕೆ.ಶಿ
माननीय नरेन्द्र मोदी जी और उनकी सरकार की चुप्पी अपने आपमें चिंताजनक भी है और रहस्यमयी भी!
मोदी सरकार द्वारा हमारे नागरिकों, राजदूतों को वापस लाने बारे कोई प्लान ना बनाना, ना लागू करना अपने आप में सरकार की जिम्मेदारी में सख्त कोताही का ज्वलंत उदाहरण है। pic.twitter.com/9CHfq2CATU
— Randeep Singh Surjewala (@rssurjewala) August 16, 2021
ಯಡಿಯೂರಪ್ಪಗೆ ಮೋದಿ ಅವಮಾನಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ. ಯಡಿಯೂರಪ್ಪರನ್ನ ಏಕೆ ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ ಎಂಬುವುದನ್ನ ಮೋದಿ ಹೇಳಲಿ. ಬ್ಲಾಕ್ ಮೇಲ್ ಮಾಡಿ ಕೆಳಗೆ ಇಳಿಸಿದರಾ? ಇಲ್ಲಾ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರ? ಎಂದು ಸುರ್ಜೆವಾಲಾ ಪ್ರಶ್ನಿಸಿದರು.
कांग्रेस पार्टी देश के हितों की रक्षा करने वाले हर मदद, हर कदम के साथ खड़ी है।
पर आज के खतरनाक हालात में जब अफगानिस्तान की सरकार यकायक गिर गई है और तालिबान ने टेकऑवर कर लिया है, तो हम भारत की सरकार से एक मैच्योर राजनीतिक, रणनीतिक और डिप्लोमैटिक रिस्पोंस की अपेक्षा करते हैं! pic.twitter.com/LhXN7o7bJE
— Randeep Singh Surjewala (@rssurjewala) August 16, 2021
ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಾರೆ. ಅವರು ರಾಯಚೂರಿಗೆ ಬಂದು ವಾಸ್ತವ ಅರಿಯಲಿ. ಕಳೆದ 7ವರ್ಷದಲ್ಲಿ ಜನರ ಜೇಬು ಕತ್ತರಿಸಿ ಬಿಜೆಪಿ 79 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಜನರ ಜೇಬಿಗೆ ಕತ್ತರಿ ಹಾಕಲಾಗಿದೆ. ಮೋದಿ 22 ಲಕ್ಷ 30,868 ಕೋಟಿ ಹಣ ಸಂಗ್ರಹಿಸಿದ್ದಾರೆ. ನಾನು ಹೇಳಿದ್ದು ಸುಳ್ಳಾಗಿದ್ರೆ ನಾನು ಬಹಿರಂಗ ಚರ್ಚೆಗೆ ಸಿದ್ದ ಎಂದರು. ಆಗಸ್ಟ್ 20ರ ನಂತರ ದೇಶದ ಎಲ್ಲಾ ವಿರೋಧ ಪಕ್ಷಗಳು ಒಂದಾಗಲಿವೆ. ಮುಂಬರುವ ಚುನಾವಣೆಯಲ್ಲಿ ದೊಡ್ಡ ರಣತಂತ್ರ ರೂಪಿಸಲಾಗುತ್ತದೆ. ಮೋದಿ ಕೇವಲ ಭ್ರಮೆಯಲ್ಲಿದ್ದಾರೆ. ಸುಳ್ಳಿನ ಕತೆ ಕಟ್ಟೊದರಲ್ಲಿ ನಿಸ್ಸಿಮರಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧವಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ.