ಉರ್ಫಿ ಫ್ಯಾಷನ್ ಗೆ ರಣಬೀರ್ ಕಪೂರ್ ಖಡಕ್ ರಿಯಾಕ್ಷನ್

Public TV
1 Min Read
FotoJet 44

ಬಾಲಿವುಡ್ ನಟಿ, ಫ್ಯಾಷನ್ ಜಗತ್ತಿನಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಉರ್ಫಿ ಜಾವೇದ್ (Urfi Javed) ಬಗ್ಗೆ ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಕಾಮೆಂಟ್ ಮಾಡಿದ್ದಾರೆ. ಕರೀನಾ ಕಪೂರ್ (Kareena Kapoor) ಜೊತೆಗಿನ ಸಂದರ್ಶನದಲ್ಲಿ ಅವರು ಉರ್ಫಿ ಕುರಿತಾಗಿ ಮಾತನಾಡಿದ್ದಾರೆ. ಆಕೆಯ ಫ್ಯಾಷನ್ ಅಭಿರುಚಿಯ ಬಗ್ಗೆಯೂ ಹೇಳಿದ್ದಾರೆ.

urfi javed 1

ಸಂದರ್ಶನದಲ್ಲಿ ರಣಬೀರ್ ಕಪೂರ್ ಗೆ ಪ್ರಶ್ನೆ ಮಾಡುವ ಕರೀನಾ, ‘ಫ್ಯಾಷನ್ ವಿಷಯದಲ್ಲಿ ಉರ್ಫಿ ಬಗ್ಗೆ ಏನು ಹೇಳುತ್ತೀರಿ? ಅವರ ಫ್ಯಾಷನ್ ಗೆ ನೀವು ಅಭಿಮಾನಿಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ರಣಬೀರ್ ‘ನಾನು ಅವಳ ಫ್ಯಾಷನ್ ಗೆ ಕಂಡಿತಾ ಅಭಿಮಾನಿಯಲ್ಲ. ಅಸಲಿಯಾಗಿ ಅದು ಫ್ಯಾಷನ್ ಅಲ್ಲ. ಅವಳ ಕೆಟ್ಟ ಅಭಿರುಚಿ’ ಎಂದು ಉತ್ತರಿಸಿದ್ದಾರೆ ರಣಬೀರ್. ಇದನ್ನೂ ಓದಿ: ಭೈರತಿ ರಣಗಲ್‌ಗೆ `ಕೆಜಿಎಫ್ 2′ ರವಿ ಬಸ್ರೂರು ಸಂಗೀತ

Urfi Javed

ಉರ್ಫಿ ಜಾವೇದ್ ಬಗ್ಗೆ ರಣಬೀರ್ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮಾತಿಗೆ ಉರ್ಫಿ ಯಾವ ರೀತಿಯಲ್ಲಿ ತಿರುಗೇಟು ನೀಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ. ತನ್ನ ತಂಟೆಗೆ ಬರುವ ಯಾರನ್ನೂ ಉರ್ಫಿ ಬಿಡುವುದಿಲ್ಲ. ಈಗಾಗಲೇ ತನ್ನ ಬಗ್ಗೆ ಕಾಮೆಂಟ್ ಮಾಡಿರುವವರಿಗೆ ಅಷ್ಟೇ ತೀವ್ರಗತಿಯಲ್ಲಿ ಉತ್ತರ ಕೊಟ್ಟಿದ್ದಾರೆ ಉರ್ಫಿ. ಇದೀಗ ಯಾವ ರೀತಿಯಲ್ಲಿ ಆ ಕಾಮೆಂಟ್ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

urfi

ಉರ್ಫಿ ವಿಚಿತ್ರ ಕಾಸ್ಟ್ಯೂಮ್ ಗಳಿಂದ ಸದಾ ಸುದ್ದಿಯಲ್ಲಿ ಇರುತ್ತೇವೆ. ಅರೆಬರೆ ಬಟ್ಟೆ ಹಾಕಿಕೊಂಡು ಬೀದಿಗಿಳಿಯುವ ಅವರ ಬಗ್ಗೆ ಈಗಾಗಲೇ ಹಲವು ದೂರುಗಳು ಕೂಡ ದಾಖಲಾಗಿವೆ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಅವರು ಏರಿದ್ದಾರೆ. ಆದರೂ, ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ವಿವಿಧ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಕಾರಣದಿಂದಾಗಿಯೇ ದಿನದಿಂದ ದಿನಕ್ಕೆ ಅವರ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *