ಯಶ್ ನಟನೆಯ ʻರಾಮಾಯಣʼ ಚಿತ್ರದ (Ramayana Cinema) ಫಸ್ಟ್ ಗ್ಲಿಂಪ್ಸ್ ರಿಲೀಸ್ ಆದ ಬಳಿಕವಂತೂ ಕುತೂಹಲ ಹೆಚ್ಚಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿದ್ದರೇ ಸಾಯಿಪಲ್ಲವಿ (Sai Pallavi) ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ʻರಾಮಾಯಣʼ ಮೊದಲ ಭಾಗ ತೆರೆಕಾಣೋಕೆ ಸಜ್ಜಾಗಿದೆ.
ಮೊದಲ ಭಾಗದ ಚಿತ್ರೀಕರಣವೂ ಮುಕ್ತಾಯವಾಗಿದ್ದು, ಈ ನಡುವೆ ನಟ ರಣ್‌ಬೀರ್ ಕಪೂರ್ (Ranbir Kapoor) ಕುರಿತಾಗಿ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಚಿತ್ರದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿರುವ ರಣ್‌ಬೀರ್ ಕಪೂರ್ ಇದೇ ಪಾತ್ರಕ್ಕಾಗಿ ಆಹಾರ ಪದ್ಧತಿಯನ್ನ ಸಂಪೂರ್ಣವಾಗಿ ಬದಲಿಸಿಕೊಂಡಿದ್ದರಂತೆ. ಮಾಂಸಾಹಾರ, ಮದ್ಯಸೇವನೆ ತ್ಯಜಿಸಿ ಸಾತ್ವಿಕ ಆಹಾರ ಪದ್ಧತಿಯ ಮೊರೆ ಹೋಗಿದ್ದರಂತೆ. ಇದನ್ನೂ ಓದಿ: ಸಾಹಸಸಿಂಹ ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ
ಮರ್ಯಾದಾ ಪುರುಷೋತ್ತಮ ರಾಮ ಸಕಲ ಆಸೆಗಳನ್ನ ತ್ಯಜಿಸಿದ್ದ ರಘುಕುಲ ತಿಲಕ. ಇಂಥಹ ದೈವಾಂಶಸಂಭೂತ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಆಧ್ಯಾತ್ಮಿಕ ಶಿಸ್ತನ್ನ ರೂಢಿಸಿಕೊಂಡಿದ್ದರಂತೆ ರಣ್‌ಬೀರ್ ಕಪೂರ್. ಮದ್ಯ ಹಾಗೂ ಮಾಂಸಾಹಾರ ಸೇವನೆ ತ್ಯಜಿಸಿದ್ದರಂತೆ. ಧ್ಯಾನ ಹಾಗೂ ಯೋಗದ ಮೂಲಕ ದೇಹ ಹುರಿಗೊಳಿಸಿಕೊಂಡು ರಾಮನ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರಂತೆ. ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಬಹಳವೇ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ವಿನಯ್ ಜೊತೆ ರಮ್ಯಾ ಸುತ್ತಾಟ ಎಂದವರಿಗೆ ತಿರುಗೇಟು ಕೊಟ್ಟ ಮೋಹಕತಾರೆ
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʻರಾಮಾಯಣʼ ಮಹಾಕಾವ್ಯದಲ್ಲಿ ರಾಮನ ಪಾತ್ರದಲ್ಲಿ ನಟಿಸಲು ರಣಬೀರ್ ಕಪೂರ್ ತಮ್ಮ ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವ ವಿಚಾರ ಒಂದೊಂದಾಗೇ ಇದೀಗ ರಿವ್ಹೀಲ್ ಆಗುತ್ತಿದೆ. ಪರದೆಯ ಮೇಲೆ ರಾಮನ ದೈವಿಕತೆಯನ್ನ ಪ್ರತಿಬಿಂಬಿಸುವ ಪಾತ್ರ ಮಾಡುವಾಗ ರಣ್‌ಬೀರ್ ಜೀವನಶೈಲಿ ಬದಲಾವಣೆಯ ಮಹತ್ವದ ತೀರ್ಮಾನ ತೆಗೆದುಕೊಂಡು ವಿಶೇಷ ವ್ಯಕ್ತಿತ್ವ ಪ್ರದರ್ಶಿಸಿದ್ದಾರೆ.
ಬಹುಶಃ ಮುಂದಿನ ದಿನಗಳಲ್ಲಿ ಖುದ್ದು ರಣ್‌ಬೀರ್ ಕಪೂರ್ ಈ ವಿಚಾರವಾಗಿ ಮಾತನಾಡುವ ಸಾಧ್ಯತೆ ಇದೆ. ಅದಕ್ಕೂ ಮುನ್ನವೇ ಅವರು ಕೈಗೊಂಡಿದ್ದ ಮಹತ್ವದ ಸಂಕಲ್ಪ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್