ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ದಂಪತಿ ಪುತ್ರಿ ರಾಹಾಳನ್ನ ಸಾರ್ವಜನಿಕ ವಲಯದಿಂದ ದೂರವಿಟ್ಟಿದ್ದಾರೆ. ಇದೀಗ ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಅಯಾನ್ ಮುಖರ್ಜಿ ಜೊತೆ ರಾಹಾ (Raha) ಕಾಣಿಸಿಕೊಂಡಿದ್ದು, ಆಕೆಯ ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ:‘ಯುನಿಸೆಫ್ ಇಂಡಿಯಾ’ಗೆ ರಾಯಭಾರಿಯಾದ ಕರೀನಾ ಕಪೂರ್
ರಾಹಾ ಹುಟ್ಟಿದ ದಿನದಿಂದಲೂ ಆಕೆಯ ಮುಖವನ್ನು ಆಲಿಯಾ ದಂಪತಿ ರಿವೀಲ್ ಮಾಡಿರಲಿಲ್ಲ. ಅದಾದ ಬಳಿಕ ಕಳೆದ ವರ್ಷ ಅಂತ್ಯದಲ್ಲಿ ಕ್ರಿಸ್‌ಮಸ್ ಹಬ್ಬದಂದು ಮೊದಲ ಬಾರಿಗೆ ರಾಹಾಳ ಮುಖ ರಿವೀಲ್ ಮಾಡಿದ್ದರು. ಆ ನಂತರ ಇದೀಗ 2ನೇ ಬಾರಿ ರಾಹಾ ಕಾಣಿಸಿಕೊಂಡಿದ್ದಾಳೆ.
View this post on Instagram
ರಾಹಾಳ ಮುದ್ದು ಮುಖ ಆಕೆಯ ಕಣ್ಣೋಟ ತುಂಟಾಟದ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕೆಲವರು ರಾಹಾ ಲುಕ್ ಅನ್ನು ರಣ್‌ಬೀರ್ ಹೋಲಿಸಿದ್ರೆ, ಇನ್ನೂ ಕೆಲವರು ನಟ ರಿಷಿ ಕಪೂರ್‌ಗೆ ಹೋಲಿಸಿ ಮೆಚ್ಚುಗೆ ಸೂಚಿಸಿದ್ದಾರೆ. ತಾತನಂತೆಯೇ ಮೊಮ್ಮಗಳು ಎಂದು ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ, ರಣ್‌ಬೀರ್ ಕಪೂರ್ ಅನಿಮಲ್ ಸಕ್ಸಸ್ ನಂತರ ‘ರಾಮಾಯಣ’ (Ramayana) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್ ಕೂಡ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.