ಭಾರತೀಯ ಸಿನಿಮಾ ರಂಗದಲ್ಲಿ ಥಿಯೇಟರ್ ಮೇಲೆ ಕೆಜಿಎಫ್ 2 ಸಿನಿಮಾದ ರಾಕಿಭಾಯ್ ಗರ್ಜಿಸುತ್ತಿದ್ದರೆ, ತೆರೆಯಾಚೆ ಬಾಲಿವುಡ್ ತಾರೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆ ಸುದ್ದಿಯಾಗುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್
Advertisement
ನಿನ್ನೆಯಿಂದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮದುವೆ ಕಾರ್ಯಗಳು ಶುರುವಾಗಿದ್ದವು. ಮೊದಲು ಹಲ್ದಿ ಕಾರ್ಯಕ್ರಮಗಳು ನಡೆದಿವೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಅನೇಕ ತಾರೆಯರು ಭಾಗಿಯಾಗಿದ್ದರು. ಇವತ್ತು ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಂಗೀತ ಕಾರ್ಯಕ್ರಮದಲ್ಲಿ ತಮ್ಮದೇ ಸಿನಿಮಾ ಹಾಡಿಗೆ ಆಲಿಯಾ ಭಟ್ ನೃತ್ಯ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ
Advertisement
Advertisement
ಆಲಿಯಾ ಭಟ್ ಅವರ ವೃತ್ತಿ ಜೀವನದ ಅತೀ ಮಹತ್ವದ ಸಿನಿಮಾವಾದ ‘ರಾಝಿ’ಯ ದಿಲ್ಬರೋ ಹಾಡಿಗೆ ಆಲಿಯಾ ಡಾನ್ಸ್ ಮಾಡಲಿದ್ದಾರಂತೆ. 2018ರಲ್ಲಿ ತೆರೆಕಂಡ ಈ ಸಿನಿಮಾ ಆಲಿಯಾ ಭಟ್ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವು ನೀಡಿತ್ತು. ಈ ಚಿತ್ರದ ಅಭಿನಯಕ್ಕಾಗಿ ಅವರು ಸಾಕಷ್ಟು ಪ್ರಶಸ್ತಿಗಳು ಬಂದಿದ್ದವು. ಅಲ್ಲದೇ, ಈ ಸಿನಿಮಾದ ನಟನೆಯು ಪ್ರಶಂಸೆಗೆ ಪಾತ್ರವಾಗಿತ್ತು. ರಾ ಏಜೆಂಟ್ ಆಗಿ ಆಲಿಯಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2
Advertisement
ಈಗಾಗಲೇ ಈ ಹಾಡಿನ ನೃತ್ಯಕ್ಕೆ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದು, ದಿಲ್ಬರೋ ಹಾಡಿನ ನಂತರ ಆಲಿಯಾ ಮತ್ತು ರಣಬೀರ್ ಕಾಂಬಿನೇಷನ್ ನ ಗೀತೆಗಳಿಗೆ ಈ ಜೋಡಿ ನೃತ್ಯ ಮಾಡಲಿದೆಯಂತೆ. ಒಟ್ಟು ಐದು ದಿನಗಳ ಕಾಲ ನಡೆಯುವ ಮದುವೆ ಕಾರ್ಯಗಳನ್ನು ಆದಷ್ಟು ಗೌಪ್ಯವಾಗಿ ಇಡಲಾಗಿದೆ. ಬೆರಳೆಣಿಕೆಯ ಗಣ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನಂತರ ಆರತಕ್ಷತೆ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ಹೋಟಲ್ ಬುಕ್ ಆಗಿದ್ದು, ಅಲ್ಲಿ ಸಿನಿ ತಾರೆಯರಿಗೆ ಆಹ್ವಾನ ನೀಡಿದ್ದಾರಂತೆ.