ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅವರು 16ನೇ ಬೆಂಗಳೂರು ಚಲನಚಿತ್ರೋತ್ಸವದಲ್ಲಿ (Film Festival) ಭಾಗಿಯಾಗಿದ್ದಾರೆ. ಈ ವೇಳೆ, ಹೀರೋಗಳಂತೆಯೇ ಮಹಿಳೆಯರಿಗೂ ಸಂಭಾವನೆ ವಿಚಾರದಲ್ಲಿ ಆದ್ಯತೆ ಕೊಡಿ ಎಂದಿದ್ದಾರೆ. ಚಿತ್ರರಂಗದಲ್ಲಿ ನಟಿಯರಿಗೆ ನೀಡೋ ಸಂಭಾವನೆ (Salary) ಬಗ್ಗೆ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನನ್ನನ್ನು ಎಲ್ಲರೂ ಸೇರಿ ಟ್ರ್ಯಾಪ್ ಮಾಡಿದ್ರು.. ಅದ್ಕೆ ಈ ರೀತಿ ಕೆಲಸ ಮಾಡಿದ್ದೇನೆ: ನಟಿ ರನ್ಯಾ ಅಳಲು
ನನ್ನೊಂದಿಗೆ ಆಕ್ಟ್ ಮಾಡಿದ್ದ ಹೊಸಬರು, ಇಂದು ಸೂಪರ್ ಸ್ಟಾರ್ಸ್ ಆಗಿದ್ದಾರೆ. ನನ್ನ ಜೊತೆ ನಟನೆ ಮಾಡಿರೋ ಎಲ್ಲರೂ ಇವತ್ತು ಸೂಪರ್ ಸ್ಟಾರ್ಸ್ ಆಗಿದ್ದಾರೆ. ಆಗ ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರು, ಒಂದು ಸಿನಿಮಾ ಹಿಟ್ ಆದ್ಮೇಲೆ ಮುಂದಿನ ಚಿತ್ರಕ್ಕೆ ನನಗಿಂತ 50ರಷ್ಟು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು.
ಹೀರೋ ಜೊತೆ ಒಟ್ಟಿಗೆ ಕೆಲಸ ಮಾಡಿ ಹಿಟ್ ಕೊಟ್ಟಿರುತ್ತೇವೆ. ಆದರೆ ಹೀರೋಗಳಿಗೆ ಕೋಟಿ ಕೋಟಿ ಸಂಭಾವನೆ ಸಿಗ್ತಿದ್ದರೆ, ನಾವು ಕೋಟಿ ತಲುಪೋದಕ್ಕೂ ಕಷ್ಟಪಡುತ್ತಿದ್ವಿ. ಮಹಿಳಾ ಕಲಾವಿದರಿಗೂ ಅದೇ ಆದ್ಯತೆ ಕೊಡಬೇಕು. ನಮ್ಮ ಕ್ಷೇತ್ರ ಒಂದೇ ಅಲ್ಲ, ಎಲ್ಲಾ ಕ್ಷೇತ್ರದಲ್ಲೂ ಈ ರೀತಿ ಸಮಸ್ಯೆಯಿದೆ ಎಂದು ಮಹಿಳೆಯರಿಗೆ ಬರೋ ಸಂಭಾವನೆ ಬಗ್ಗೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.