ಬೆಂಗಳೂರು: ವಿಧಾನಸಭಾ ಚುನಾವಣೆಯ ಬಳಿಕ ಸೈಲೆಂಟಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಇದೀಗ ಶಾಸಕ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರೆ.
ಹೌದು. ಕರ್ನಾಟಕ ವಿಧಾನ ಸಭೆ ಚುನಾವಣೆ ಮತ್ತು ಮೈತ್ರಿ ಸರ್ಕಾರ, ಸಂಪುಟ ರಚನೆಯಿಂದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಆದ್ರೆ ಇದೀಗ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ನಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
Advertisement
Advertisement
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಪುತ್ರ ನಲಪಾಡ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಹ್ಯಾರಿಸ್ ಯಾವುದೇ ಮುಖಂಡರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ರಮ್ಯಾ ಅವರನ್ನ ಮುಂದಿಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರಂತೆ. ರಮ್ಯಾ ದೆಹಲಿಯಲ್ಲಿ ತಮಗಿರುವ ಸಂಪರ್ಕ ಬಳಸಿ ಅಲ್ಪಸಂಖ್ಯಾತ ಖೋಟಾದಲ್ಲಿ ರೋಶನ್ ಬೇಗ್ ಬದಲು ಹ್ಯಾರಿಸ್‍ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
Advertisement
ಹ್ಯಾರಿಸ್ ಪರ ರಮ್ಯಾ ಲಾಬಿ ಯಾಕೆ ಗೊತ್ತೆ?
ಈ ಹಿಂದೆ ರಮ್ಯಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಅವರು ಹ್ಯಾರಿಸ್ ಪರವಾಗಿ ರೋಡ್ ಶೋ ನಡೆಸಿದ್ದರು. ಅಲ್ಲದೇ ಶಾಂತಿನಗರ ನಿವಾಸಿಯಾಗಿರುವ ರಮ್ಯಾ ಅವರು ಶಾಸಕ ಹ್ಯಾರಿಸ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸ್ಥಳೀಯ ಶಾಸಕರಾಗಿರುವ ಹ್ಯಾರಿಸ್ ಪರವಾಗಿ ಸಚಿವರಾಗಬೇಕು ಎನ್ನುವ ಉದ್ದೇಶ ಅವರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.